Attempt to murder case : 02 Arrested

ದಿನಾಂಕ 27-12-2017 ರಂದು 00.30 ಗಂಟೆಗೆ ಮಂಗಳೂರು ತಾಲೂಕು, ಜಪ್ಪಿನಮೊಗರು ಎಂಬಲ್ಲಿ  ಪಂಪ್ ವೆಲ್ ಕಡೆಯಿಂದ ವೋಕ್ಸ್ ವಾಗನ್ ಪೋಲೋ ಕಾರು KA 19 ME 4614 ರಲ್ಲಿದ್ದ ಅರೋಪಿಗಳು ಆಟೋ ರಿಕ್ಷಾಕ್ಕೆ ಕಾರನ್ನು ಅಡ್ಡ ನಿಲ್ಲಿಸಿ ತಡೆದು, “ನಿನಗೆ ಮಾರ್ಗದಲ್ಲಿ ಸರಿಯಾಗಿ ಆಟೋ ರಿಕ್ಷಾವನ್ನು ಓಡಿಸುವುದಕ್ಕೆ ಆಗುವುದಿಲ್ಲವೇ ಬೇವಾರ್ಸಿ ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದಾಗ, ನಾನು ರಿಕ್ಷಾವನ್ನು ಸರಿಯಾದ ರೀತಿಯಲ್ಲಿ ಓಡಿಸುತ್ತೇನೆ, ನೀವು ನಿಮ್ಮ ಕಾರನ್ನು ಸರಿಯಾಗಿ ಓಡಿಸಿ ಎಂದು ತಿಳಿಸಿದಾಗ, ಆ ವ್ಯಕ್ತಿಯು ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಹೇಳಿ ಒಮ್ಮೆಲೇ ಕಾರಿನ ಒಳಗಡೆ ಇದ್ದ ಟ್ಯೂಬ್ ಲೈಟ್ ಚೌಕಟ್ಟನ್ನು ತೆಗೆದು ಬಲವಾಗಿ ಮುಖಕ್ಕೆ ಒಂದೆರಡು ಬಾರಿ ಚುಚ್ಚಿದ್ದು  ಆಗ ಕಾರು ಚಾಲಕನು ಕಾರನ್ನು ಆಟೋ ರಿಕ್ಷಾಕ್ಕೆ ಹಾಯಿಸಿದಾಗ ಹಿಂದಿನಿಂದ ಆಟೋ ರಿಕ್ಷಾವೊಂದು ಬರುತ್ತಿರುವುದನ್ನು ನೋಡಿ ಅವರಿಬ್ಬರು ಅದೇ ಕಾರಿನಲ್ಲಿ ಪಂಪ್ ವೆಲ್ ಕಡೆಗೆ ಹೋಗಿ ಪರಾರಿಯಾಗಿದ್ದು ಈ ಬಗ್ಗೆ  ಮಹಮ್ಮದ್ ರಿಜ್ವಾನ್ (32) ತಂದೆ ಉಮ್ಮರಬ್ಬ ವಾಸ: ಸಫಾರ್ ಕ್ಲಬ್, 2ನೇ ಕ್ರಾಸ್, ಮಂಚಿಲ, ಮಂಗಳೂರು ಎಂಬವರು ಪಿರ್ಯಾದು ನೀಡಿದ್ದು, ಅದರಂತೆ ಕಂಕನಾಡಿ ನಗರ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ

ಪ್ರಕರಣ ಅರೋಪಿಗಳಾದ ಭವಿತ್ರಾಜ್ (25) ತಂದೆ ದಿ|| ಉಮನಾಥ ಕೊಟ್ಯಾನ್ ವಾಸ: ದುರ್ಗಾ ನಿಲಯ ಸರಿಪಲ್ಲ ಮನೆ ಪೆದಮಲೆ ಅಂಚೆ ನೀರುಮಾರ್ಗ ಗ್ರಾಮ ಮಂಗಳೂರು ತಾಲೂಕು ಮತ್ತು ವೆಂಕಟೇಶ್ (34) ತಂದೆ ರಾಮಯ್ಯ  ವಾಸ: ಉಳಿಯೂರು ದುರ್ಗ ಹೊಬಳಿ ಅಳವೂರು ಗ್ರಾಮ  ಕುಣಿಗಲ್ಲು ತಾಲೂಕು ತುಮಕೂರು ಜಿಲ್ಲೆ ಎಂಬವರನ್ನು ದಿನಾಂಕ 28-12-2017 ರಂದು ದಸ್ತಗಿರಿ ಮಾಡಿ ಬಂಧಿತರಿಂದ ಕೃತ್ಯಕ್ಕೆ ಉಪಯೋಗಿಸಿದ  ಟ್ಯೂಬ್ ಲೈಟ್ ಚೌಕಟ್ಟನ್ನು ಮತ್ತು ಕಾರು KA 19 ME 4614 ಕಾರನ್ನು ವಶಪಡಿಸಿಕೊಳ್ಳಲಾಗಿದೆ

                 ಮೇಲಿನ ಕೃತ್ಯವು ವಾಹನಕ್ಕೆ ಸೈಡ್ ಕೊಡುವ ವಿಚಾರದಲ್ಲಿ ನಡೆದಿದ್ದು ಆರೋಪಿ ಗಳು ಟ್ಯೂಬ್ ಲೈಟ್ ಚೌಕಟ್ಟಿನಿಂದ ಹಲ್ಲೆ ಮಾಡಿರುವುದು ತಿಳಿದು ಬಂದಿರುತ್ತದೆ.

ಈ ಕಾರ್ಯಾಚರಣೆಯು ಕಂಕನಾಡಿ ನಗರ ಪೊಲೀಸ್ ನಿರೀಕ್ಷಕರಾದ ಶ್ರೀ ರವಿ ನಾಯ್ಕ್ ನೇತೃತ್ವದಲ್ಲಿ, ಪಿಎಸ್‌ಐ ಪ್ರದೀಪ್‌ ಟಿ.ಅರ್. ಸಿಬ್ಬಂದಿಯವರಾದ ಭಾಸ್ಕರ್ ಮದನ್‌, ವಿನೋದ್, ರಘುವೀರ್, ಮೇಘರಾಜ್ ನೂತನ್ ಕುಮಾರ್, ಸಂದೀಫ್, ನಿತೇಶ್‌ ರವರುಗಳು ಕಾರ್ಯಾಚರಣೆ ನಡೆಸಿ ಪ್ರಕರಣವನ್ನು ಬೇಧಿಸಿರುತ್ತಾರೆ.

Leave a Reply

Your email address will not be published. Required fields are marked *