Associate of Rashid Malabari nabbed by the Anti Rowdy Squad

2013ನೇ ಇಸವಿಯಲ್ಲಿ ಪಣಂಬೂರು ಪೊಲೀಸು ಠಾಣೆಯಲ್ಲಿ  ಭೂಗತ ಪಾತಕಿ ರಶೀದ್ ಮಲಬಾರಿ ಮತ್ತು ಆತನ ಸಹಚರ ಪಣಂಬೂರು ಠಾಣಾ ರೌಡಿ ಅಸಾಮಿ ಮಹಮ್ಮದ್ ಶಮೀರ್ @ ಡಾಮಿ @ ಡೆಡ್ಲಿ 27 ತಂದೆ: ಮಹಮ್ಮದ್ ಆಲಿ ವಾಸ: ರೈಲ್ವೇ ಗೇಟಿನ ಹತ್ತಿರ ಕೆ ಬಿ ಎಸ್ ಜೋಕಟ್ಟೆ ಮಂಗಳೂರು  ಎಂಬಾತನ ವಿರುದ್ಧ ಹಫ್ತ ವಸೂಲಿ ಮತ್ತು ಬೆದರಿಕೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು ಸದ್ರಿ ಪ್ರಕರಣದಲ್ಲಿ ಮಹಮ್ಮದ್ ಶಮೀರ್ನನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿರುವುದಾಗಿದೆ. ಅಲ್ಲದೇ ಪಣಂಬೂರು ಠಾಣೆಯಲ್ಲಿ ದಾಖಲಾದ ಹಲ್ಲೆ ಪ್ರಕರಣದಲ್ಲಿಯೂ  ತಲೆಮರೆಸಿಕೊಂಡಿದ್ದ ರೌಡಿ ಅಸಾಮಿಯನ್ನು ಪುತ್ತೂರು ತಾಲೂಕು ಕಬಕ ಗ್ರಾಮದ ಕಲ್ಲಂತಡ್ಕ ಎಂಬಲ್ಲಿ ವಾಸ್ತವ್ಯವಿರುವ ಬಗ್ಗೆ ಮಾಹಿತಿ ಸಂಗ್ರಹಿಸಿ ಮಂಗಳೂರು ಉತ್ತರ ಉಪ ವಿಭಾಗದ ರೌಡಿ ನಿಗ್ರಹ ದಳದ ಪೊಲೀಸು ನಿರೀಕ್ಷಕರಾದ ಶ್ರೀ ರಫೀಕ್ ಕೆ ಎಮ್ ಇವರ ನೇತೃತ್ವದ ತಂಡ ಪತ್ತೆ ಮಾಡಿರುವುದಾಗಿದೆ. ಸದ್ರಿ ರೌಡಿ ಅಸಾಮಿಯ ವಿರುದ್ಧ ಪಣಂಬೂರು ಠಾಣೆಯಲ್ಲಿ ಒಟ್ಟು 5 ಪ್ರಕರಣ ಮತ್ತು ಸುರತ್ಕಲ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿರುವುದಾಗಿದೆ. ಸದ್ರಿ ಆರೋಪಿಯ ಪತ್ತೆಯ ಬಗ್ಗೆ ಮಂಗಳೂರು ಉತ್ತರ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ. ರಾಜೇಂದ್ರ ಡಿ ಎಸ್ ಇವರ ನೇತೃತ್ವ್ವದ ಮಂಗಳೂರು ಉತ್ತರ ಉಪ ವಿಭಾಗದ ರೌಡಿ ನಿಗ್ರಹ ದಳದ ಪೊಲೀಸು ನಿರೀಕ್ಷಕರಾದ ಶ್ರೀ ರಫೀಕ್ ಕೆ ಎಮ್ ಮತ್ತು ಸಿಬ್ಬಂದಿಗಳ ತಂಡ ಪತ್ತೆ ಮಾಡಿರುವುದಾಗಿದೆ.

 

Leave a Reply

Your email address will not be published. Required fields are marked *