Arms License/ renewal; Information

ಸಂಖ್ಯೆ:ಎಂ.ಎ.ಜಿ/ 67 (1) /ಮಂ.ನ/2017 ಪೊಲೀಸು ಆಯುಕ್ತರ ಕಛೇರಿ
ಮಂಗಳೂರು ನಗರ, ಮಂಗಳೂರು
ದಿನಾಂಕ. 08-06-2017.

ಪತ್ರಿಕಾ ಪ್ರಕಟಣೆ

ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಆಯುಧ ಪರವಾನಿಗೆ ಮಂಜೂರಿಸಲು ಹಾಗೂ ನವೀಕರಿಸಲು The Arms Act 1959 ಹಾಗೂ The Arms Rules 2016 ರನ್ವಯ ಪೊಲೀಸ್ ಆಯುಕ್ತರು ಮಂಗಳೂರು ನಗರ ರವರು ಪರವಾನಿಗೆ ಪ್ರಾಧಿಕಾರಿ ಹಾಗೂ ನವೀಕರಣ ಪ್ರಾಧಿಕಾರಿಯಾಗಿರುವುದರಿಂದ ದಿನಾಂಕ:01-05-2017 ರಿಂದ ಹೊಸ ಆಯುಧ ಪರವಾನಿಗೆ ಮಂಜೂರಾತಿ ಹಾಗೂ ಪರವಾನಿಗೆ ನವೀಕರಣ ಕಾರ್ಯಗಳನ್ನು ಈ ಕಛೇರಿಯಿಂದ ನಿರ್ವಹಿಸಲು ನಿರ್ಧರಿಸಲಾಗಿರುತ್ತದೆ.
ಅಂತೆಯೇ ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಶಸ್ತ್ರಾಸ್ತ್ರ ಕಾಯ್ದೆ ಹಾಗೂ ನಿಯಮದಡಿ ಆಯುಧ ಪರವಾನಿಗೆ ಪಡೆಯಲು, ನವೀಕರಿಸಲು ಹಾಗೂ ನಿರಾಕ್ಷೇಪಣಾ ಪತ್ರ ಪಡೆದುಕೊಳ್ಳಲು ಈ ಕಛೇರಿಗೆ ಅರ್ಜಿಯನ್ನು ಸಲ್ಲಿಸುವಂತೆ ಸಾರ್ವಜನಿಕರಿಗೆ ತಿಳಿಸಲಾಗಿದೆ.

ಸಹಿಯಾಗಿದೆ/-
ಪೊಲೀಸ್ ಆಯುಕ್ತರು,
ಮಂಗಳೂರು ನಗರ, ಮಂಗಳೂರು.

Leave a Reply

Your email address will not be published. Required fields are marked *