100 ನೇ ಫೋನ್ ಇನ್ ವಿಶೇಷ ಕಾರ್ಯಕ್ರಮ

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಾರ್ವಜನಿಕರ ದೂರುಗಳು, ಸಲಹೆ ಮತ್ತು ಅಹವಾಲುಗಳನ್ನು ಪಡೆದುಕೊಳ್ಳುವ ದೃಷ್ಟಿಯಿಂದ ದಿನಾಂಕ 05-08-2016 ರಿಂದ ಆಗಿನ ಪೊಲೀಸ್ ಆಯುಕ್ತರಾದ ಶ್ರೀ ಚಂದ್ರಸೇಖರ ಐಪಿಎಸ್ ರವರು ಪ್ರಾರಂಬಿಸಿದ್ದು, ಇದನ್ನು ಮುಂದಿವರೆಸುತ್ತಾ ಈ ಫೋನ್ ಇನ್ ಕಾರ್ಯಕ್ರಮವನ್ನು ಪ್ರತಿ ವಾರದ ಶುಕ್ರವಾರದಂದು ಬೆಳಿಗ್ಗೆ 10-00 ಗಂಟೆಯಿಂದ 11-00 ಗಂಟೆಯ ವರೆಗೆ ನಡೆಸಲಾಗುತ್ತಿದೆ. ಈ ವರೆಗೆ ನಗರದಲ್ಲಿ ಒಟ್ಟು 99 ಫೋನ್ ಇನ್ ಕಾರ್ಯಕ್ರಮವನ್ನು ನಡೆಸಲಾಗಿದ್ದು, ಇದರಲ್ಲಿ 01 ರಿಂದ 44 ವರೆಗೆ ಫೋನ್ ಇನ್ ಕಾರ್ಯಕ್ರಮವನ್ನು ಶ್ರೀ ಚಂದ್ರಸೇಖರ್ ಐಪಿಎಸ್ ರವರು ನೆರವೆರಿಸಿದ್ದು, 79 ನೇ ಫೋನ್ ಇನ್ ಕಾರ್ಯಕ್ರಮವನ್ನು ಶ್ರೀ ವಿಫುಲ್ ಕುಮಾರ್ ಐಪಿಎಸ್ ರವರು ನೆರವೆರಿಸಿದ್ದು, ನಂತರದ 45 ರಿಂದ ಈ ವರೆಗಿನ ಫೋನ್ ಇನ್ ಕಾರ್ಯಕ್ರಮವನ್ನು ಶ್ರೀ ಟಿ.ಅರ್ ಸುರೇಶ್ ಐಪಿಎಸ್ ರವರು ನೆರವೆರಿಸಿರುತ್ತಾರೆ.
ಸಾರ್ವಜನಿಕರಿಂದ ಈ ಫೋನ್ ಇನ್ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯನ್ನು ನೀಡುತ್ತಾ ಬಂದಿರುತ್ತಾರೆ.
ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಜನಸ್ನೇಹಿ ಪೊಲೀಸ್ ಆಗಿದ್ದು, ಸಾರ್ವಜನಿಕರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಜನ ಸಾಮಾನ್ಯರ ತೊಂದರೆಗಳಿಗೆ, ಸಮಸ್ಯೆಗಳಿಗೆ ಆಲಿಸುವಲ್ಲಿ ಹಾಗೂ ಪೊಲೀಸ್ ಇಲಾಖೆಯಿಂದ ಆಗಬೇಕಾದ ಸುಧಾರಣೆಯ ಕುರಿತು ಸಲಹೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿರುತ್ತದೆ. ಅಲ್ಲದೇ ಸಾರ್ವಜನಿಕ ವಲಯದಿಂದ ಅಕ್ರಮ ಚಟುವಟಿಕೆಯ ಕುರಿತು ಗುಪ್ತ ಮಾಹಿತಿಗಳನ್ನು ಕೂಡ ಈ ಫೋನ್ ಇನ್ ಕಾರ್ಯಕ್ರಮದಲ್ಲಿ ಪಡೆದು ಸೂಕ್ತ ಕ್ರಮವನ್ನು ಕೈಗೊಳ್ಳಲಾಗಿರುತ್ತದೆ. ಮುಖ್ಯವಾಗಿ ನಗರದ ಸಂಚಾರ ಸುವ್ಯವಸ್ಥೆಯ ಸುಧಾರಣೆಯ ದೃಷ್ಟಿಯಿಂದ ಈ ಕಾರ್ಯಕ್ರಮವು ಪ್ರಮುಖ ಪಾತ್ರವನ್ನು ವಹಿಸಿರುತ್ತದೆ. ಈ ಫೋನ್ ಇನ್ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ದೂರುಗಳು ಮಾತ್ರ ಬಾರದೇ ಇತರೆ ಇಲಾಖೆಗೆ ಸಂಬಂಧಿಸಿದ ದೂರುಗಳನ್ನು ಕೂಡಾ ಸ್ವೀಕರಿಸಿ ಸಂಬಂಧಪಟ್ಟ ಇಲಾಖೆಗೆ ದೂರಿನ ಕುರಿತು ಪತ್ರ ವ್ಯವಹಾರವನ್ನು ನಡೆಸಿ ಸೂಕ್ತ ಕ್ರಮವನ್ನು ಕೈಗೊಳ್ಳಲಾಗಿರುತ್ತದೆ. ಈಗೇ ಈ ಫೋನ್ ಇನ್ ಕಾರ್ಯಕ್ರಮವು ಸಾರ್ವಜನಿಕರ ಮೆಚ್ಚುಗೆ ಪಾತ್ರವಾಗಿ ಜನಮನ್ನಣೆ ಗಳಿಸಿರುತ್ತದೆ.

ಈ ವರೆಗೆ ನಡೆದ 99 ಫೋನ್ ಇನ್ ಕಾರ್ಯಕ್ರಮದಲ್ಲಿ ಒಟ್ಟು 2242 ಕರೆಗಳು ಸ್ವೀಕೃತಿಯಾಗಿದ್ದು, ಇದರಲ್ಲಿ 1584 ಪ್ರಕರಣಗಳು ಸಂಚಾರ ಸುವ್ಯವಸ್ಥೆಗೆ ಸಂಬಂಧಪಟ್ಟದಾಗಿದ್ದು, 359 ಪ್ರಕಣಗಳು ಕಾನೂನು ಸುವ್ಯವಸ್ಥೆಗೆ, 97 ಪ್ರಕರಣಗಳಿ ಇತರೆ ಇಲಾಖೆಗೆ ಸಂಬಂಧಪಟ್ಟ ಪ್ರಕರಣಗಳಾಗಿರುತ್ತದೆ. ಇದರಲ್ಲಿ 202 ಪ್ರಕರಣಗಳನ್ನು ನೇರವಾಗಿ ಫೋನ್ ಇನ್ ಕಾರ್ಯಕ್ರಮದಲ್ಲಿ ವಿಲೇವಾರಿಗೊಳಿಸಲಾಗಿರುತ್ತದೆ.
ಫೋನ್ ಇನ್ ಕಾರ್ಯಕ್ರಮದಲ್ಲಿ ಹೆಚ್ಚಿನ ಪ್ರಕರಣಗಳು ಸಂಚಾರ ಸುವ್ಯವಸ್ಥೆಗೆ ಸಂಬಂಧಪಟ್ಟ ದೂರುಗಳು, ಅಹವಾಲುಗಳು ಹಾಗೂ ಸಲಹೆಗಳು ಬರುವುದರಿಂದ ನಗರದ ಸಂಚಾರಿ ಅಧಿಕಾರಿಗಳ ಹಾಜರಾತಿಯಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ. ಈ ಫೋನ್ ಇನ್ ಕಾರ್ಯಕ್ರಮದಲ್ಲಿ ಬರುವ ದೂರುಗಳಿಗೆ ಸಂಬಂಧಿಸಿ ಆಯಯಾ ವ್ಯಾಪ್ತಿಗೆ ಸಂಬಂಧಿಸಿದ ಉಪ ವಿಭಾಗಧಿಕಾರಿಗಳಿಂದ/ ಠಾಣಾಧಿಕಾರಿಗಳಿಂದ ಪರಿಶೀಲಿಸಿ ಸಂಬಂಧಿಸಿದ ದೂರುಗಳಿಗೆ ಸೂಕ್ತ ಕ್ರಮವನ್ನು ಕೈಗೊಳ್ಳಲಾಗುತ್ತಿದ್ದು, ಈ ವರೆಗೆ ಫೂರ್ತಿಯಾಗಿ ಒಟ್ಟು 1747 ದೂರು ಅರ್ಜಿಗಳನ್ನು, ಭಾಗಶ: 398 ಪ್ರಕರಣಗಳನ್ನು ಸ್ಪಂದಿಸಲಾಗಿರುತ್ತದೆ, 97 ಪ್ರಕರಣವನ್ನು ಇತರೆ ಇಲಾಖೆಗೆ ವರ್ಗಾವಣೆ ಮಾಡಲಾಗಿರುತ್ತದೆ.
ಶೇಕಡವಾರು ನೋಡುವುದಾದರೆ ಈ ಫೋನ್ ಇನ್ ಕಾರ್ಯಕ್ರಮದಲ್ಲಿ 71% ದೂರುಗಳು ಸಂಚಾರ ಸುವ್ಯವಸ್ಥೆಗೆ ಸಂಬಂಧಿಸಿದಾಗಿದ್ದು, 16% ದೂರುಗಳು ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದಾಗಿದ್ದು, 04% ದೂರುಗಳು ಇತರೆ ಇಲಾಖೆಗೆ ಸಂಬಂಧಪಟ್ಟ ದೂರುಗಳಾಗಿದ್ದು, 9% ದೂರುಗಳನ್ನು ನೇರವಾಗಿ ಫೋನ್ ಇನ್ ಕಾರ್ಯಕ್ರಮದಲ್ಲೇ ವಿಲೇವಾರಿಗೊಳಿಸಲಾಗಿದೆ.
ಈ ನಿಟ್ಟಿಯಲ್ಲಿ ದಿನಾಂಕ 04-01-2019 ರಂದು 100 ನೇ ಫೋನ್ ಇನ್ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಪ್ರಯುಕ್ತ ವಿಶೇಷವಾಗಿ ಕಾರ್ಯಕ್ರಮವನ್ನು ಬೆಳಿಗ್ಗೆ 10 ಗಂಟೆಯಿಂದ 12 ಗಂಟೆಯ ವರೆಗೆ ನಡೆಸಲಾಗುವುದು. 11-00 ಗಂಟೆಯಿಂದ 12-00 ಗಂಟೆಯ ಮಧ್ಯೆ ಫೋನ್ ಇನ್ ಕಾರ್ಯಕ್ರಮದ ಅನಿಸಿಕೆಗಳನ್ನು ಹಾಗೂ ಈ ಕಾರ್ಯಕ್ರಮವನ್ನು ಮುಂದಕ್ಕೆ ಯಶಸ್ವಿಗೊಳಿಸಲು ಸಲಹೆ, ಸೂಚನೆಗಳನ್ನು, ಮಾಧ್ಯಮ ಮಿತ್ರರೊಂದಿಗೆ ಸಂವಾದ ಕಾರ್ಯಕ್ರಮವನ್ನು, ಟ್ರಾಫಿಕ್ ವಾರ್ಡನ್ ಮತ್ತು ಇತರರಿಗೆ ಅಭಿನಂದನಾ ಸನ್ಮಾನ ಕಾರ್ಯಕ್ರಮ, ಬಹುಮಾನ ವಿತರಣೆ ಕಾರ್ಯಕ್ರಮವನ್ನು ಎರ್ಪಾಡಿಸಲಾಗಿರುತ್ತದೆ.

Leave a Reply

Your email address will not be published. Required fields are marked *