ಸಿಸಿಬಿ ಘಟಕದ ಎಸಿಪಿ ರವರಾದ ಶ್ರೀ.ವೆಲೆಂಟೈನ್ ಡಿ’ಸೋಜ ಹಾಗೂ ಸಿಬ್ಬಂದಿಯವರಿಂದ 14 ಕೆ.ಜಿ ಗಾಂಜಾ ವಶ ಇಬ್ಬರು ಆರೋಪಿಗಳ ಬಂಧನ

ದಿನಾಂಕ 27-05-2017 ರಂದು ಸಿಸಿಬಿ ಘಟಕದ ಎಸಿಪಿ ರವರಾದ ಶ್ರೀ.ವೆಲೆಂಟೈನ್ ಡಿ’ಸೋಜ ಮತ್ತು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶ್ರೀ.ಶ್ಯಾಮ್ ಸುಂದರ್ ರವರು ರೌಂಡ್ಸ್ ಕರ್ತವ್ಯದಲ್ಲಿದ್ದ ಸಮಯದಲ್ಲಿ  ಸಿಲ್ವರ್ ಬಣ್ಣದ ಕೆ.ಎ.01,ಎಂಸಿ 52 ನಂಬರಿನ ಮಾರುತಿ 800 ಕಾರಿನಲ್ಲಿ ಗಾಂಜಾವನ್ನು ಸಾಗಿಸುತ್ತಿದ್ದಾರೆ ಎಂಬುದಾಗಿ ಬಂದ ಮಾಹಿತಿಯಂತೆ ಮುಡಿಪು ಬಳಿಯ ಕಾಯರ್ ಗೋಳಿ ಕ್ರಾಸ್ ಬಳಿಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಸಮಯದಲ್ಲಿ ಮಾಹಿತಿಯಲ್ಲಿ ಬಂದ ಮಾರುತಿ 800 ನ್ನು ಕಾರನ್ನು ತಪಾಸಣೆ ಮಾಡಿದಾಗ  ಅದರಲ್ಲಿ ಇಬ್ಬರು ವ್ಯಕ್ತಿಗಳು ಇದ್ದು ಇವರುಗಳು ಆಂದ್ರಪ್ರದೇಶದ ಪಳಮನೀರ್ ಎಂಬಲ್ಲಿರುವ ಶೇಖ್ ಸಲೀಂ ಭಾಷಾ ಎಂಬವನಿಂದ  14 ಕೆ.ಜಿ ಗಾಂಜಾವನ್ನು  ಪಡೆದುಕೊಂಡು ಬಂದು ಇಲ್ಲಿಯ ಜನರಿಗೆ ಹಾಗೂ ಕೇರಳ ರಾಜ್ಯದ ಮಂಜೇಶ್ವರ, ಉಪ್ಪಳಕ್ಕೆ ಮಾರಾಟ ಮಾಡುವುದಾಗಿ ತಿಳಿಸಿದರು.  ಸಿಸಿಬಿ ಪೊಲೀಸರು ಈ ಕೆಳಗಿನ  ಇಬ್ಬರು ವ್ಯಕ್ತಿಗಳನ್ನು ದಸ್ತಗಿರಿ ಮಾಡಿದ್ದು ಅವರುಗಳಿಂದ 14 ಕೆ.ಜಿ ಗಾಂಜಾ ಮತ್ತು ಒಂದು ಮಾರುತಿ 800 ಕಾರು, ಎರಡು ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡಿರುತ್ತಾರೆ. ಸ್ವಾಧೀನಪಡಿಸಿಕೊಂಡಿರುವ ಸೊತ್ತುಗಳ ಮೌಲ್ಯ 3,35,400/- ರೂಪಾಯಿ ಆಗಿರುತ್ತದೆ. ದಸ್ತಗಿರಿ ಮಾಡಿರುವ ಆರೋಪಿಗಳ ಹೆಸರು ವಿಳಾಸ  ಈ ಕೆಳಗಿನಂತಿವೆ.

  1. ಅಬ್ದುಲ್ ಅಜೀಜ್, 35 ವರ್ಷ ತಂದೆ: ಇಬ್ರಾಹಿಂ,  ವಾಸ:  ತೌಡುಗೋಳಿ ಕ್ರಾಸ್,  ನರಿಂಗಾನ ಗ್ರಾಮ, ಬಂಟ್ವಾಳ ತಾಲೂಕು.
  2. ಮೊಹಮ್ಮದ್ ಮುಸ್ತಾಫ ಯಾನೆ ಗಿಡಿ, ಪ್ರಾಯ 44 ವರ್ಷ  ತಂದೆ:  ನರಿಂಗಾನ ಗ್ರಾಮ ಬಂಟ್ವಾಳ ತಾಲೂಕು.

ಅಬ್ದುಲ್ ಅಜೀಜ್ ನು ಈ ಹಿಂದೆ ಗಾಂಜಾ ಮಾರಾಟ ಮಾಡುತ್ತಿದ್ದ ಸಮಯ ಉಳ್ಳಾಲ ಪೊಲೀಸ್ ಠಾಣೆಯಲ್ಲಿ 2016 ನೇ ಇಸವಿಯಲ್ಲಿ  ಪ್ರಕರಣ ದಾಖಲಾಗಿರುತ್ತದೆ.

ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ.ಎಂ.ಚಂದ್ರಶೇಖರ ರವರ ಆದೇಶದಂತೆ ಡಾ: ಸಂಜೀವ ಎಂ.ಪಾಟೀಲ್ ,ಉಪ ಪೊಲೀಸ್ ಆಯುಕ್ತರು, ಅಪರಾಧ ಮತ್ತು ಸಂಚಾರ ವಿಭಾಗದ ನಿರ್ಧೆಶನದಲ್ಲಿ ಕಾರ್ಯಾಚರಣೆ ನಡೆಸಿದ್ದು ಸಿಸಿಬಿ ಘಟಕದ ಸಿಬ್ಬಂದಿಯವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

 

Leave a Reply

Your email address will not be published. Required fields are marked *