ಸಂಚಾರ ಪೂರ್ವ ಠಾಣಾ ಪೊಲೀಸರಿಂದ ಮಾರಣಾಂತಿಕ ಅಪಘಾತವನ್ನುಂಟು ಮಾಡಿ ಪರಾರಿಯಾದ ಆರೋಪಿಯ ಬಂಧನ

ದಿನಾಂಕ : 29-05-2017 ರಂದು ತಡರಾತ್ರಿ ಪಂಪ್ ವೆಲ್ ವೃತ್ತದ ಬಳಿ ಸಂಭವಿಸಿದ ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣದ ಕುರಿತು ಸಂಚಾರ ಪೂರ್ವ ಠಾಣೆಯಲ್ಲಿ ಅ. ಕ್ರ : 91/2017 ಕಲಂ : 279, 304(ಎ) ಐಪಿಸಿ ಜೊತೆಗೆ 134 (ಎ)&(ಬಿ) ಐಎಂವಿ ಕಾಯ್ದೆಯಂತೆ ಪ್ರಕರಣ ದಾಖಲಾಗಿದ್ದು, ಈ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಅಪಘಾತಪಡಿಸಿದ ವಾಹನದ ಚಾಲಕ ವಾಹನವನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ.
ಈ ಪ್ರಕರಣವನ್ನು ಬೇಧಿಸಲು ಸಂಚಾರ ಪೂರ್ವ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಸುರೇಶ್ ಕುಮಾರ್ ರವರು ವೈಜ್ಞಾನಿಕ ವಿಧಾನವನ್ನು ಬಳಸಿಕೊಂಡು ಆರೋಪಿ ಚಾಲಕ ಮತ್ತು ವಾಹನದ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುತ್ತಾರೆ.
ಪ್ರಕರಣದ ಬೆನ್ನಟ್ಟಿದ ತಂಡವು ನಗರದ ಹಲವು ಕಡೆಗಳಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಅಪಘಾತಪಡಿಸಿದ ವಾಹನ ಮತ್ತು ಚಾಲಕನ ಸುಳಿವಿನ ಬಗ್ಗೆ ಪ್ರಯತ್ನಿಸಿದ್ದು, ಆನಂತರ ಸುರತ್ಕಲ್ ಹಾಗೂ ಪಡುಬಿದ್ರೆ ಟೋಲ್ ಗೇಟ್ ಗಳಲ್ಲಿ ಪರಿಶೀಲಿಸಿದ್ದು, ನಂತರ ಹೆಚ್ಚಿನ ತನಿಖೆಗಾಗಿ ತಲಪಾಡಿ ಟೋಲ್ ಗೇಟ್ ನಲ್ಲಿರುವ ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಲಾಗಿ, ಅಪಘಾತಪಡಿಸಿದ ವಾಹನದ ಎಡಬದಿಯ ಹೆಡ್ ಲೈಟ್ ಜಖಂಗೊಂಡಿರುವ ಆರು ಚಕ್ರದ ಲಾರಿಯೊಂದರ ಮೇಲೆ ಸಂಶಯಗೊಂಡು ತನಿಖೆ ಮುಂದುವರಿಸಿರುತ್ತಾರೆ. ಸದ್ರಿ ವಾಹನವು ಕೇರಳದ ಎರ್ನಾಕುಲಂ ಜಿಲ್ಲೆಯ ಪೆರಂಬವೂರು ಎಂಬಲ್ಲಿನ ವ್ಯಕ್ತಿಯೊಬ್ಬರ ಮಾಲಕತ್ವದಲ್ಲಿದ್ದು, ವಾಹನದ ನೋಂದಣಿ ಸಂಖ್ಯೆ : ಕೆಎಲ್ 40 ಡಿ 6678 ಎಂಬುದಾಗಿ ತಿಳಿದು ಬಂದಿರುತ್ತದೆ. ಆರೋಪಿ ವಾಹನ ಚಾಲಕ ಗೋಪಾಲಕೃಷ್ಣ ರವರನ್ನು ವಶಕ್ಕೆ ಪಡೆದುಕೊಂಡು ಮಾನ್ಯ ನ್ಯಾಯಾಲಯಕ್ಕೆ ದಿನಾಂಕ : 08-06-2017 ರಂದು ಹಾಜರುಪಡಿಸಲಾಗಿದೆ.
ಸಿಸಿಟಿವಿಯಲ್ಲಿ ದೊರೆತ ಸಣ್ಣ ಸುಳಿವೊಂದರ ಮೂಲಕ ಈ ಪ್ರಕರಣವನ್ನು ಬೇಧಿಸುವಲ್ಲಿ ತಂಡವು ಯಶಸ್ವಿಯಾಗಿದ್ದು, ತಂಡದಲ್ಲಿರುವ ಶ್ರೀ ಸುರೇಶ್ ಕುಮಾರ್ ,ಪಿ.ಐ, ಶ್ರಿ ಪ್ರವೀಣ್ ಕುಮಾರ್, ಎಎಸ್ಐ, ಶ್ರೀ ಯಶವಂತ, ಸಿಹೆಚ್ ಸಿ, ಶ್ರೀ ಸಂಜೀವ, ಸಿಹೆಚ್ ಸಿ ಮತ್ತು ಶ್ರೀ ತಸ್ಲೀಂ ಆರೀಫ್, ಸಿಹೆಚ್ ಸಿ ರವರನ್ನು ಮಾನ್ಯ ಪೊಲೀಸ್ ಆಯುಕ್ತರು ಮಂಗಳೂರು ನಗರರವರು ಅಭಿನಂದಿಸಿರುತ್ತಾರೆ

Leave a Reply

Your email address will not be published. Required fields are marked *