ಮೊಬೈಲ್ ಫೋನ್ ಕಳ್ಳರ ಬಂಧನ

ದಿನಾಂಕ 10-08-2017 ರಂದು ಮಂಗಳೂರು ನಗರದ ಮಾರ್ಕೆಟ್ ರಸ್ತೆಯ ಆದರ್ಶ್ ಲಾಡ್ಜಿನ ಎದುರು ರಸ್ತೆಬದಿಯಲ್ಲಿ ಕಳವು ಗೈದ ಮೊಬೈಲ್ ಗಳನ್ನು ಮಾರಾಟ ಮಾಡಲೆಂದು ಬಂದಿದ್ದ

1) ಮೊಹಮ್ಮದ್ ಇರ್ಫಾನ್ (25) ತಂದೆ: ಸಯ್ಯದ್ ಬಹಾದ್ದೂರ್, ವಾಸ: ಚನ್ನಪಟ್ನ, ರಾಮನಗರ ಜಿಲ್ಲೆ ,

2) ಸಯ್ಯದ್ ಜುಬೇರ್ (22) ತಂದೆ: ನಸ್ರುಲ್ಲಾ ಖಾನ್, ವಾಸ: ಚನ್ನಪಟ್ನ, ರಾಮನಗರ ಜಿಲ್ಲೆ ,

3) ಜಮೀರ್ (42) ತಂದೆ: ಜಾಫರ್ ವಾಸ: ಚನ್ನಪಟ್ನ, ರಾಮನಗರ ಜಿಲ್ಲೆ

ಇವರುಗಳನ್ನು ಬಂದರು ಪೊಲೀಸರು ಕಾರ್ಯಾಚರಣೆ ನಡೆಸಿ ಬಂದಿಸಿರುತ್ತಾರೆ. ಈ ಬಗ್ಗೆ ಠಾಣೆಯಲ್ಲಿ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುತ್ತಾರೆ.

ಮೇಲೆ ತಿಳಿಸಿದ ಆರೋಪಿಗಳಿಂದ ಒಟ್ಟು 13 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದು, ಈ ಮೊಬೈಲ್ ಗಳನ್ನು ತಾವು ಜನನಿಬಿಡ ಸ್ಥಳಗಳಲ್ಲಿ ಕಳವು ಗೈದಿರುವುದಾಗಿ ತಿಳಿಸಿರುತ್ತಾರೆ. ವಶಪಡಿಸಿಕೊಂಡ ಮೊಬೈಲ್ ಫೋನ್ ಗಳ ಒಟ್ಟು ಅಂದಾಜು ಮೌಲ್ಯ ರೂ.50,000/- ಆಗಬಹುದು.

ಈ ಕಾರ್ಯಾಚರಣೆಯಲ್ಲಿ ಉತ್ತರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಶಾಂತಾರಾಮ್,  ಎ.ಎಸ್.ಐ. ದಯಾನಂದ, ಪದ್ಮನಾಭ ಹಾಗೂ ಸಿಬ್ಬಂದಿಗಳಾದ ಜಾರ್ಜ್ ವ್ಯಾಲೆಸ್ಟಿನ್ ಡಿ ಸೋಜಾ, ವಾಸು ನಾಯ್ಕ, ಸುಜನ್ ಶೆಟ್ಟಿ, ಗೋವರ್ಧನ್, ವೆಂಕಟೇಶ್, ಅಂದಾನ್ ಸ್ವಾಮಿ  ಇವರು ಭಾಗವಹಿಸಿರುತ್ತಾರೆ.

Leave a Reply

Your email address will not be published. Required fields are marked *