ಮೊಬೈಲ್ ಕಳವು ಆರೋಪಿಗಳ ಬಂಧನ

ದಿನಾಂಕ 03-11-2017 ರಂದು ರಾತ್ರಿ ಸಮಯ ಬಂಟ್ವಾಳ ತಾಲೂಕು ಕುರ್ನಾಡು ಗ್ರಾಮದ ಮುಡಿಪು ಜಂಕ್ಷನ್‌‌ನಲ್ಲಿ ಕೃಷ್ಣ ಕಮ್ಯೂನಿಕೇಷನ್ ಎಂಬ ಹೆಸರಿನ ಮೊಬೈಲ್ ಅಂಗಡಿಗೆ ಕಳ್ಳರು ನುಗ್ಗಿ ಹೊಸ ಮತ್ತು ಹಳೆ ಮೊಬೈಲ್ ಹ್ಯಾಂಡ್‌‌ಸೆಟ್‌ಗಳನ್ನು ಕಳವು ಮಾಡಿದ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.

ಈ ಪ್ರಕರಣದ ತನಿಖೆಯನ್ನು ಮುಂದುವರಿಸಿ, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ನಡೆಸಿ ದಿನಾಂಕ 26-12-2017 ರಂದು ಕೊಣಾಜೆ ಪೊಲೀಸರು ಮತ್ತು ಮಂಗಳೂರುದಕ್ಷಿಣ  ರೌಡಿ ನಿಗ್ರಹ ದಳದ ಸಿಬ್ಬಂದಿಯವರು ಬಾಳೆಪುಣಿಯ ಗರಡಿಪಳ್ಳ ಎಂಬಲ್ಲಿ ಆರೋಪಿಗಳಾದ ಆರೋಪಿಗಳಾದ ಝಿಯಾದ್(19), ಬೊಳ್ಮಾರ್, ತಲೆಕ್ಕಿ, ವರ್ಕಾಡಿ ಗ್ರಾಮ, ಮಂಜೇಶ್ವರ ಮತ್ತು ಮಹಮ್ಮದ್ ಅಶ್ರಫ್@ ಅಶ್ರಫ್@ ಇರ್ಫಾನ್(19), ತಲೆಕ್ಕಿ ದೈಲ ಮನೆ, ವರ್ಕಾಡಿ ಗ್ರಾಮ, ಮಂಜೇಶ್ವರ ಎಂಬವರನ್ನು ದಸ್ತಗಿರಿ ಮಾಡಿಕೊಂಡು ಆರೋಪಿಗಳ ವಶದಿಂದ ಕಳವು ಮಾಡಿದ ಮೊಬೈಲ್ ಫೋನ್‌‌ಗಳು ಮತ್ತು ಕೃತ್ಯಕ್ಕೆ ಉಪಯೋಗಿಸಿದ ಮೋಟಾರ್ ಸೈಕಲ್‌ ನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ. ಆರೋಪಿಗಳನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ. ಇನ್ನುಳಿದ ಆರೋಪಿಗಳು ತಲೆಮರೆಸಿಕೊಂಡಿದ್ದು, ದಸ್ತಗಿರಿಗೆ ಬಾಕಿ ಇರುತ್ತದೆ. ಈ ಬಗ್ಗೆ ತನಿಖೆ ಮುಂದುವರಿದಿದೆ.

ಈ ಕಾರ್ಯಾಚರಣೆಯನ್ನು ಮಂಗಳೂರು ಪೊಲೀಸ್ ಆಯುಕ್ತರಾದ ಶ್ರೀ ಸುರೇಶ್ ಐ.ಪಿ.ಎಸ್, ಡಿ.ಸಿ.ಪಿ ಶ್ರೀ ಹನುಮಂತರಾಯ ಐ.ಪಿ.ಎಸ್ (ಕಾ.ಸು), ಮತ್ತು ಡಿ.ಸಿ.ಪಿ ಶ್ರೀಮತಿ ಉಮಾ ಪ್ರಶಾಂತ್ (ಸಂಚಾರ ಮತ್ತು ಅಪರಾಧ) ಹಾಗೂ ಎ.ಸಿ.ಪಿ ದಕ್ಷಿಣ ಉಪ-ವಿಭಾಗರವರಾದ ಶ್ರೀ ರಾಮ ರಾವ್‌‌ ರವರ ಮಾರ್ಗದರ್ಶನದಂತೆ ಕೊಣಾಜೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ಅಶೋಕ್. ಪಿ, ಪಿ.ಎಸ್.ಐ ವೆಂಕಟೇಶ್, ರವಿ ಪವಾರ್ ಹಾಗೂ ಸಿಬ್ಬಂದಿಯವರಾದ ಅಶೋಕ್, ನಾಗರಾಜ್, ವಿಜಯ್, ಭಾಸ್ಕರ, ಗಿರೀಶ್ ಹಾಗೂ ರೌಡಿ ನಿಗ್ರಹ ದಳದ ಗಿರೀಶ್, ಸುನಿಲ್, ಮಹೇಶ್, ಶೆರೀಫ್ ಮತ್ತು ದಯಾನಂದರವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುತ್ತಾರೆ. ಈ ಬಗ್ಗೆ ತನಿಖೆಯನ್ನು ಮುಂದುವರಿಸಲಾಗಿದೆ.

 

Leave a Reply

Your email address will not be published. Required fields are marked *