ಮಂಗಳೂರು ನಗರ ಪೊಲೀಸ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವತಿಯಿಂದ ಪತ್ರಿಕಾ ಪ್ರಕಟಣೆ ದಿನಾಂಕ 12-07-2017

ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಂಗಳೂರು ನಗರದಲ್ಲಿ ಕೆಲವು ಅಹಿತಕರ ಘಟನೆಗಳು ಜರುಗಿದ್ದು, ಕಳೆಡೆರಡು ದಿನಗಳಲ್ಲಿ ಯಾವುದೇ ಮತೀಯ ಗಲಭೆಗೆ ಹಾಗೂ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಕ್ರಮಗಳನ್ನು ತಗೆದುಕೊಂಡದ್ದು ಇರುತ್ತದೆ. ಕಳೆದ 24 ಗಂಟೆಗಳಲ್ಲಿ ನಡೆದಂತಹ ಘಟನೆಗಳು ಯಾವುದೇ ಮತೀಯ ವಿಚಾರಗಳಿಗೆ ಸಂಬಂಧಿಸಿದ್ದಾಗಿರುವುದಿಲ್ಲ. ಹಾಗೂ ಈ ವೇಳೆಯಲ್ಲಿ ನಡೆದಂತಹ ಮೂರು ಪ್ರಕರಣಗಳ ಸಂಕ್ಷಿಪ್ತ ವಿವರ ಕೆಳಕಂಡಂತೆ ಇರುತ್ತದೆ.
ದಿನಾಂಕ 10-07-2017 ರಂದು ಸುಮಾರು 07-00 ಗಂಟೆಗೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡ ಪದವು ಕಾಲೇಜಿನ ಹತ್ತಿರ ಅಬುಬಕ್ಕರ್ ಸಿದ್ದಿಕಿ (30) ಎಂಬುವರು ತಲೆಯ ಮದ್ಯದಲ್ಲಿ ಗಾಯಗೊಂಡಿದ್ದು, ರಕ್ತ ಸ್ರಾವದ ಪಿರ್ಯಾದನ್ನು ತಿಳಿದ ತಕ್ಷಣ ಬಜ್ಪೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರು ಪ್ರಕರಣವನ್ನು ದಾಖಲಿಸಿಕೊಂಡು (CR No 186/2017 ಕಲಂ 324 IPC) ತನಿಖೆ ಮುಂದುವರೆಸಿದ್ದು, ಗಾಯಾಳು ಮಂಗಳೂರು ನಗರದ ಹೈಲೆಂಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಬಿಡುಗಡೆಗೊಂಡಿರುತ್ತಾನೆ. ಈ ಪ್ರಕರಣದಲ್ಲಿ ತನಿಖಾ ಪ್ರಗತಿಯಾಗಿದ್ದು ಇಲ್ಲಿಯವರೆಗಿನ ತನಿಖೆಯ ಪ್ರಕಾರ ಇದು ವಯ್ಯಕ್ತಿಕ ಕಾರಣಗಳಿಂದ ನಡೆದಂತ ಪ್ರಕರಣವಾಗಿದ್ದು ಯಾವುದೇ ಕೋಮು ಘಟನೆಗಳಿಗೆ ಸಂಬಂಧ ಇರುವುದಿಲ್ಲ ಎಂದು ತಿಳಿದು ಬಂದಿರುತ್ತದೆ.
ದಿನಾಂಕ 11-07-2017 ರಂದು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಆಜಾದ್ ನಗರದಲ್ಲಿ ಆಸ್ಟಿನ್ ನಿತೇಶ್ ಮೊಂಟೆರೋ(29) ಎಂಬವರಿಗೆ ಸುಮಾರು 12-00 ಗಂಟೆಗೆ ಎಡಗೈಯಲ್ಲಿ ಹರಿತ ಗಾಯವಾಗಿದ್ದು ಹಾಗು ಮುಖದ ದವಡೆಯಲ್ಲಿ ಪೆಟ್ಟು ಆಗಿದ್ದು ಠಾಣೆಯ (CR No 343/2017 ಕಲಂ 341, 323, 324, 307 r/w 34 IPC) ನೇದರ ತನಿಖೆ ಕೈಗೊಂಡು ಉಳ್ಳಾಲ ಪೊಲೀಸ್ ವೃತ್ತ ನಿರೀಕ್ಷಕರು ತನಿಖಾ ಪ್ರಗತಿ ಸಾದಿಸಿದ್ದು ಇರುತ್ತದೆ. ಈ ಪ್ರಕರಣದಲ್ಲಿ ಮೂರು ಜನ ದುಷ್ಕರ್ಮಿಗಳು ಹಲ್ಲೆ ಮಾಡಿದ್ದರ ಬಗ್ಗೆ ಖಚಿತ ಸುಳಿವು ದೊರೆಕಿದ್ದು ಶೀಘ್ರದಲ್ಲೇ ಆರೋಪಿಗಳ ದಸ್ತಗಿರಿ ಮಾಡಲಾಗುವುದು. ಈ ಪ್ರಕರಣವು ಸಹ ಯಾವುದೇ ಕೋಮು ಘಟನೆಗಳಿಗೆ ಸಂಬಂಧ ಇರುವುದಿಲ್ಲ ಎಂದು ತಿಳಿದು ಬಂದಿರುತ್ತದೆ.
ದಿನಾಂಕ 11-07-2017 ರಂದು ಸಂಜೆ 05-30 ಗಂಟೆಗೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಇಳಂತಿಲ ಗ್ರಾಮದ ರಿಫಾಯಿ ನಗರದಲ್ಲಿ ಅಬ್ದುಲ್ ರೆಹಮಾನ್ ಎಂಬವರಿಗೆ ಯಾರೋ ನಾಲ್ಕು ಜನ ಅಡ್ಡಗಟ್ಟಿ ಅವರ ಬಳಿಯಲ್ಲಿದ್ದ 9000/- ರೂ ಗಳನ್ನು ದೊಚಿಕೊಂಡು ಹೋಗಿದ್ದು ಈ ಬಗ್ಗೆ ಉಪ್ಪಿನಂಗಡಿ ಠಾಣೆಯ (CR No 121/2017 ಕಲಂ 394,427 r/w 34 IPC) ನೇದರ ತನಿಖೆ ಕೈಗೊಂಡಿದ್ದು ಈ ಪ್ರಕರಣವು ಕೂಡ ಯಾವುದೇ ಕೋಮು ಘಟನೆಗಳಿಗೆ ಸಂಬಂಧ ಇರುವುದಿಲ್ಲ ಎಂದು ತಿಳಿದು ಬಂದಿರುತ್ತದೆ. ಹಾಗೂ ತನಿಖಾಧಿಕಾರಿಗಳು ಶೀಘ್ರವೇ ಪ್ರಕರಣವು ಬೇದಿಸಿ ಆರೋಪಿತರ ಪತ್ತೆ ಹಚ್ಚಲಾಗುವುದು.
ಮಂಗಳೂರು ನಗರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಾದ್ಯಮ ಮಿತ್ರರಿಗೂ ಹಾಗೂ ಸಾರ್ವಜನಿಕರಿಗೂ ಈ ಮೂಲಕ ಮನವಿ ಮಾಡುವುದೇನೆಂದರೆ ಯಾವುದೇ ಸಂದರ್ಭದಲ್ಲಿ ಶಾಂತಿ ಕಾಪಾಡುವುದು ಬಹುಮೂಲ್ಯವಾಗಿರುತ್ತದೆ. ಹಾಗೂ ಈ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಂಗಳೂರು ನಗರ ಜನತೆ ಪೊಲೀಸ್ ಇಲಾಖೆಗೆ ಸಹಕರಿಸಿದ್ದು ಹಾಗೂ ಶಾಂತಿ ಸುವ್ಯವಸ್ಥೆಯನ್ನು ಹತೋಟಿಗೆ ತರುವ ನಮ್ಮ ಸರ್ವ ಪ್ರಯತ್ನಗಳಿಗೆ ಸ್ಪಂದಿಸಿದ್ದಕ್ಕೆ ಧನ್ಯವಾದಗಳು.
ಮುಂಬರುವ ದಿನಗಳಲ್ಲಿ ಕೂಡ ಶಾಂತಿ ಕಾಪಾಡುತ್ತಾ ಪೊಲೀಸ್ ಇಲಾಖೆಗೆ ಹಾಗೂ ಜಿಲ್ಲಾಡಳಿತಕ್ಕೆ ಸಹಕರಿಸಲು ಮತ್ತು ಸಾರ್ವಜನಿಕ ಶಾಂತಿ ಕದಡುವ ಯಾವುದೇ ಪ್ರಯತ್ನಗಳಿಗೆ ಕಿವಿಗೊಡದಿರಲು ಈ ಮೂಲಕ ಕೋರಲಾಗಿದೆ.

ಪೊಲೀಸ್ ಆಯುಕ್ತರು ಮಂಗಳೂರು ನಗರ
ಪೊಲೀಸ್ ಆಧೀಕ್ಷಕರು ದಕ್ಷಿಣ ಕನ್ನಡ ಜಿಲ್ಲೆ

Leave a Reply

Your email address will not be published. Required fields are marked *