ಮಂಗಳೂರು ನಗರದಲ್ಲಿ ನಡೆದ ಸರಣಿ ಶೂಟೌಟ್ ಪ್ರಕರಣ: ಸಿಸಿಬಿ ಕಾರ್ಯಾಚರಣೆ 2 ಆರೋಪಿಗಳ ಸೆರೆ

ಮಂಗಳೂರು ನಗರದಲ್ಲಿ ಭೂಗತ ಪಾತಕಿ ಕಲಿ ಯೋಗೀಶನ ಸಹಚರರಿಂದ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ 2 ಪಿಸ್ತೂಲ್ ಹಾಗೂ 7 ಸಜೀವ ಮದ್ದುಗುಂಡುಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಮಂಗಳೂರು ನಗರ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಮಂಗಳೂರು ನಗರದಲ್ಲಿ ಇತ್ತೀಚೆಗೆ ಭೂಗತ ಪಾತಕಿ ಕಲಿ ಯೋಗೀಶ ಎಂಬಾತನು ತನ್ನ ಸಹಚರರಿಂದ ನಡೆಸಿದ ಸರಣಿ ಶೂಟೌಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಭಾಗಿಯಾದ ಆರೋಪಿಗಳ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸ್ ನಿರೀಕ್ಷಕರಾದ ಶಾಂತರಾಮ್ ರವರ ನೇತ್ರತ್ವದ ಸಿಸಿಬಿ ಪೊಲೀಸರು ಈ ಪ್ರಕರಣದಲ್ಲಿ ಭಾಗಿಯಾದ

1. ಮನೋಜ್ ಕುಂದರ್ @ ಮಂಜು, ಪ್ರಾಯ(35), ತಂದೆ: ಜರ್ನಾಧನ ಕುಂದರ್, ವಾಸ: ಇಂದಿರಾ ನಿಲಯ, ವಿಠೋಬಾ ಮಂದಿರದ ಬಳಿ, ಚಿತ್ರಾಪು, ಮುಲ್ಕಿ, ಮಂಗಳೂರು.
2. ಚಂದ್ರಶೇಖರ @ ಟಿಕ್ಕಿ ಅಣ್ಣು, ಪ್ರಾಯ(32), ತಂದೆ: ಅಪ್ಪು ಪೂಜಾರಿ, ವಾಸ: 5ಸೆಂಟ್ಸ್ ಸೈಟ್ ಮನೆ, ಅತ್ತೂರು ಕಾಪಿಕಾಡ್, ಪಂಜ ಕೈಕುಡೆ ಅಂಚೆ, ಪಕ್ಷಿಕೆರೆ, ಮಂಗಳೂರು

ಎಂಬವರನ್ನು ಮುಲ್ಕಿ ಚಿತ್ರಾಪು ಎಂಬಲ್ಲಿ ವಶಕ್ಕೆ ಪಡೆದುಕೊಂಡು ಅವರ ವಶದಿಂದ 2 ಪಿಸ್ತೂಲ್ ಹಾಗೂ 7 ಸಜೀವ ಮದ್ದುಗುಂಡುಗಳು, 2 ಮೊಬೈಲ್ ಫೋನ್ಗಳನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಪ್ರಕರಣಗಳ ವಿವರ
1. ಆರೋಪಿಗಳು ದಿನಾಂಕ: 07-12-2017 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿನ್ನಿಗೋಳಿ ಶ್ರೀ ರಾಜಶ್ರೀ ಜ್ಯುವೆಲರ್ಸ್ ಎಂಬಲ್ಲಿ ನಡೆಸಿದ ಶೂಟೌಟ್ ಪ್ರಕರಣ
2. ದಿನಾಂಕ: 08-12-2017 ರಂದು ರಾತ್ರಿ ಸುಮಾರು 8-00 ಗಂಟೆ ಸುಮಾರಿಗೆ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾರ್ ಸ್ಟ್ರೀಟ್ ಎಂಬಲ್ಲಿರುವ ಎಂ. ಸಂಜೀವ ಶೆಟ್ಟಿ ಸಿಲ್ಕ್ & ಸ್ಯಾರಿಸ್ ಎಂಬ ಬಟ್ಟೆ ಮಳಿಗೆಯ ಕೆಲಸದವರಾದ ಮಹಾಲಿಂಗ ನಾಯ್ಕ್ ಎಂಬವರ ಕಾಲಿಗೆ ಪಿಸ್ತೂಲ್ ನಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಪ್ರಕರಣ.
3. ದಿನಾಂಕ: 23-12-2017 ರಂದು 9-00 ಗಂಟೆ ಸುಮಾರಿಗೆ ಮುಲ್ಕಿ ಬಳಿಯ ನಾಗರಾಜ್ ಎಂಬವರ ಮನೆಯ ಕಿಟಿಕಿಗೆ ಹಾಗೂ ಅವರ ಕಾರಿಗೆ ಪಿಸ್ತೂಲ್ ನಿಂದ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಪ್ರಕರಣ.

ಆರೋಪಿಗಳ ಪೈಕಿ ಮನೋಜ್ ಕುಂದರ್ @ ಮಂಜು ಎಂಬಾತನು ಭೂಗತ ಪಾತಕಿ ಕಲಿ ಯೋಗೀಶ ಎಂಬಾತನ ಜೊತೆ ನೇರವಾಗಿ ಸಂಪರ್ಕದಲ್ಲಿದ್ದು, ಈತನ ಅದೇಶದಂತೆ ಈ ಮೇಲ್ಕಂಡ ಕೃತ್ಯಗಳನ್ನು ಎಸಗಿರುವುದಾಗಿದೆ. ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಮುಲ್ಕಿ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿರುತ್ತದೆ.

ಮಂಗಳೂರು ಸಿಸಿಬಿ ಪೊಲೀಸ್ ನಿರೀಕ್ಷಕರಾದ ಶಾಂತರಾಮ್, ಪಿಎಸ್ಐ ಶ್ಯಾಮ್ ಸುಂದರ್, ಎಎಸ್ ಐ ಹರೀಶ್ ಹಾಗೂ ಸಿಬ್ಬಂದಿಯರವರಾದ ರಾಮ ಪೂಜಾರಿ, ಗಣೇಶ್, ಚಂದ್ರಶೇಖರ, ಶೀನಪ್ಪ, ಚಂದ್ರ, ಸುಬ್ರಹ್ಮಣ್ಯ, ಚಂದ್ರಹಾಸ, ಯೋಗೀಶ್, ರಾಜೇಂದ್ರ ಪ್ರಸಾದ್, ಅಬ್ದುಲ್ ಜಬ್ಬಾರ್, ಮಣಿ, ಪ್ರಶಾಂತ್ ಶೆಟ್ಟಿ, ಅಶಿತ್ ಡಿ ಸೋಜಾ, ತೇಜಕುಮಾರ್ ಹಾಗೂ ರಿತೇಶ್ ರವರು ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

Leave a Reply

Your email address will not be published. Required fields are marked *