ಬೃಹತ್ ಮಟ್ಟದ ಮಾದಕ ವಸ್ತು ಮಾರಾಟ ಜಾಲ ಪತ್ತೆ, 4 ವ್ಯಕ್ತಿಗಳ ಬಂಧನ

ಮಂಗಳೂರು ನಗರದಲ್ಲಿ  ನಿಷೇಧಿತ ಮಾದಕ ವಸ್ತುಗಳಾದ  ಎಲ್.ಎಸ್.ಡಿ.(Lysergic Acid diethylamide) ಎಂ.ಡಿ.ಎಂ.ಎ. (Methylene Dioxy Meth Amphetami) ಮತ್ತು ಎಂ.ಡಿ.ಎಂ. (Methylene Dioxy Methamthetami) ಟ್ಯಾಬ್ಲೆಟ್ ಗಳನ್ನು ಮಾರಾಟ ಮಾಡುತ್ತಿದ್ದ,  ಅಂತರಾಜ್ಯ ಜಾಲವನ್ನು ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳ ಅಧಿಕಾರಿ ಮತ್ತು ರೌಡಿ ನಿಗ್ರಹದಳದ ತಂಡದವರು ಬೇಧಿಸಿ ದಸ್ತಗಿರಿ ಮಾಡುವಲ್ಲಿ ಯಶ್ವಸ್ವಿಯಾಗಿರುತ್ತಾರೆ.

ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹದಳದ ಸಹಾಯಕ ಪೊಲೀಸ್ ಆಯುಕ್ತರಿಗೆ ಮಂಗಳೂರು ನಗರದಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಈ ಕೆಳಕಂಡ ಆರೋಪಿಗಳನ್ನು ದಸ್ತಗಿರಿ ಮಾಡಿ ಅವರಿಂದ  ಈ ಕೆಳಕಂಡ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ದಸ್ತಗಿರಿ ಮಾಡಿರುವುದಾಗಿದೆ.

ದಸ್ತಗಿರಿ ಮಾಡಿದ ಆರೋಪಿಗಳ ವಿವರ :-

1)  ನಿಖಿಲ್.ಕೆ.ಬಿ(24)ತಂದೆ:ಕಿಶೋರ್ ಕುಮಾರ್,ಪ್ರಣನಮ್ ಮನೆ, ರೈಲ್ವೇ ನಿಲ್ದಾನ ಬಳಿ ಕಾಞಂಗಾಡ್, ಕಾಸರಗೋಡು ಜಿಲ್ಲೆ.

2) ಶ್ರವಣ ಪೂಜಾರಿ, 23 ವರ್ಷ, ತಂದೆ: ಚಂದ್ರಹಾಸ ಪೂಜಾರಿ, ವಾಸ: ರಾಘವೇಂದ್ರ ಕೃಪಾ, ವೇಗಸ್‌ ಮಿಲ್ಲಿನ ಬಳಿ, ನಿಡ್ಡೇಲ್‌, ಕುಲಶೇಖರ, ಮಂಗಳೂರು,

3) ರೋಶನ್‌ ವೇಗಸ್‌, 22 ವರ್ಷ, ತಂದೆ: ಸುರೇಶ್‌ ನಂಬಿಯಾರ್‌, ಪಂಚಾಂಗ್ಯಂ, ಎಲಯಾವೂರ್‌, ವಾರಂ ಪೋಸ್ಟ್‌, ಕಣ್ಣೂರು, ಕೇರಳ

4)ಬಾಶಿಂ ಬಸೀರ್‌, 22 ವರ್ಷ, ತಂದೆ: ಮೊಹಮದ್‌ ಬಶೀರ್‌, ವಾಸ: ಪುನ್ನಯೂರ್‌ಕುಲಂ, ಮಾವಿನಚುವಾಡು ಪೋಸ್ಟ್‌, ತ್ರಿಶೂರ್‌, ಕೇರಳ

ಈ ಮೇಲ್ಕಂಡ  ಆರೋಪಿಗಳಲ್ಲಿ 1 ನೇ ಆರೋಪಿ ನಿಖಿಲ್ ಎಂಬವನು ನಗರದ ಇಂಜಿನಿಯರಿಂಗ್ ಕಾಲೇಜಿನಲ್ಲಿ  8 ನೇ ಸೆಮಿಸ್ಟರ್ ಓದಿದ್ದು, 2 ವಿಷಯಗಳಲ್ಲಿ ಫೈಲ್ ಆಗಿರುತ್ತಾನೆ.

2 ನೇ ಆರೋಪಿ ಶ್ರವಣ್ ಪೂಜಾರಿ ಈತನು 2015 ರಲ್ಲಿ ನಗರದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿ ಪಾಸ್ ಆಗಿರುತ್ತಾನೆ.

3 ನೇ ಆರೋಪಿ ರೋಷನ್ ಸುರೇಶ್ ಮತ್ತು 4ನೇ ಬಾಸಿಂ ಬಶೀರ್  ಇಬ್ಬರೂ ನಗರದ ವೈಧ್ಯಕೀಯ ಕಾಲೇಜಿನಲ್ಲಿ 3 ನೇ ವರ್ಷದ ದಂತ ವೈಧ್ಯಕೀಯ ವಿಧ್ಯಾರ್ಥಿಗಳಾಗಿರುತ್ತಾರೆ.

ಈ ಮೇಲಿನವರಿಂದ  ಈ ಕೆಳಕಂಡ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.

  1. ಎಂ.ಡಿ.ಎಂ.ಎ. ಪೌಡರ್ 9.00 ಗ್ರಾಂ
  2. ಎಲ್.ಎಸ್.ಡಿ ಸ್ಟಾಂಪ್ -185
  3. ಎಂ.ಡಿ.ಎಂ. ಪಿಲ್ಸ್ (ಪಿಲ್ಸ್ – 25)
  4. ಇಲೆಕ್ಟ್ರಾನಿಕ್ ತೂಕದ ಯಂತ್ರ -1
  5. ಮೊಬೈಲ್ – 4
  6. ಮೋಟಾರ್ ಸೈಕಲ್ (ಯಮಹಾ) -1
  7. ಮೋಟಾರ್ ಸೈಕಲ್(ಬುಲೆಟ್)-1
  8. ಹುಕ್ಕ – 2

ಈ ಮೇಲ್ಕಂಡ ಮಾದಕ ದ್ರವ್ಯಗಳನ್ನು ತೂಕ ಮಾಡಿಕೊಡಲು ಒಬ್ಬರು ಸ್ವತಹ  ಒಂದು ತೂಕದ ಯಂತ್ರವನ್ನು ಬಳಸುತ್ತಿದ್ದು, ಅದನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಮತ್ತು 1 ನೇ ಆರೋಪಿ ನಿಖಿಲ್ ಎಂವವನು ಈ ಮಾದಕ ದ್ರವ್ಯವನ್ನು  ಪಾರ್ಟಿಗಳಿಗೆ ಸರಬರಾಜು ಮಾಡುತ್ತಿರುತ್ತಿರುವುದಾಗಿ ವಿಚಾರಣೆಯಿಂದ ತಿಳಿದು ಬಂದಿದೆ.ಈ  ಪ್ರಕರಣದ ಜಾಲದಲ್ಲಿ ಇನ್ನೂ ಕೆಲವು ಪ್ರಮುಖ ಆರೋಪಿಗಳನ್ನು ಬಂಧಿಸುವುದು ಬಾಕಿ ಇರುತ್ತದೆ.  ಹೆಚ್ಚಿನ ತನಿಖೆ ಮುಂದುವರಿದಿದೆ.

ಈ ಮೇಲೆ ವಶಪಡಿಸಿಕೊಂಡ ಎಲ್ಲಾ ಸೊತ್ತುಗಳ ಒಟ್ಟು ಮೌಲ್ಯ 5,30,500/- ಆಗಬಹುದು

ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಟಿ.ಆರ್‌.ಸುರೇಶ್, ಐ.ಪಿ.ಎಸ್. ರವರ ನಿರ್ದೇಶನದಂತೆ, ಮಾನ್ಯರಾದ ಶ್ರೀ ಹನುಮಂತರಾಯ (ಐಪಿಎಸ್‌) ಡಿ.ಸಿ.ಪಿ (ಕಾನೂನು ಮತ್ತು ಸುವ್ಯವಸ್ಥೆ) ಮತ್ತು  ಶ್ರೀಮತಿ ಉಮಾ ಪ್ರಶಾಂತ್, ಡಿ.ಸಿ.ಪಿ (ಅಪರಾಧ ಮತ್ತು ಸಂಚಾರ ವಿಭಾಗ) ರವರ ಮಾರ್ಗದರ್ಶನದಲ್ಲಿ  ಮಂಗಳೂರು ರೌಡಿ ನಿಗ್ರಹ ದಳದ ಎ.ಸಿ.ಪಿ. ಯವರು ಮತ್ತು ಸಿಬ್ಬಂದಿಯವರಾದ ಎ.ಎಸ್.ಐ ಸುಂದರ್ ಆಚಾರ್,  ಹೆಚ್ ಸಿ ಗಳಾದ  ಮೋಹನ್ ಕೆ ವಿ, ಗಿರೀಶ್ ಬೆಂಗ್ರೆ, ರವಿನಾಥ್ ಮುಲ್ಕಿ, ಸುನೀಲ್ ಕುಮಾರ್, ರೆಜಿ ವಿ ಎಂ, ರವಿಚಂದ್ರ ಪಡ್ರೆ, ದಾಮೋದರ ,ರಾಜರಾಮ್ ಕೂಟತ್ತಜೆ, ಮಹಮ್ಮದ್ ಶರೀಪ್ ,ದಯಾನಂದ , ಸುಧೀರ್ ಶೆಟ್ಟಿ ,ಮಹೇಶ್ ಕುಮಾರ್, ಮತ್ತು ಮಹಮ್ಮದ್ ಇಕ್ಬಾಲ್   ಪತ್ತೆ ಕಾರ್ಯದಲ್ಲಿ ಬಾಗವಹಿಸಿದ್ದಾರೆ.

Leave a Reply

Your email address will not be published. Required fields are marked *