ಬೃಹತ್ ಪ್ರಮಾಣದ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿತರ ಬಂಧನ, ಗಾಂಜಾ ವಶ

ದಿನಾಂಕ 11-11-2017 ರಂದು   ಹಾಸನ  ಕಡೆಯಿಂದ ಮಂಗಳೂರು ಕಡೆಗೆ  ಮಾರುತಿ 800 ಕಾರಿನಲ್ಲಿ ಬೃಹತ್ ಪ್ರಮಾಣದಲ್ಲಿ ಅಕ್ರಮವಾಗಿ  ಗಾಂಜಾ ಸಾಗಾಟ ಮಾಡುತ್ತಿದ್ದ ಬಗ್ಗೆ    ಮಂಗಳೂರು   ಪೂರ್ವ (ಕದ್ರಿ ) ಠಾಣೆಯ ಪೊಲೀಸ್ ನಿರೀಕ್ಷಕರಿಗೆ ಮಾಹಿತಿ ಬಂದಂತೆ ಬೆಳಿಗ್ಗೆ  10-30 ಗಂಟೆಗೆ ಮರೋಳಿ ಮಂಗಳೂರು ಗ್ರಾಮಾಂತರ ಠಾಣೆಯ ಹಳೇ ತಾತ್ಕಾಲಿಕ ಕಟ್ಟಡದ ಎದುರು ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಸದ್ರಿ  ಮಾರುತಿ 800 ಕಾರನ್ನು ತಡೆದು ಸುಮಾರು ರೂ 3,30,000/- ಮೌಲ್ಯದ  11 ಕೆ.ಜಿ 70 ಗ್ರಾಂ ತೂಕದ ಗಾಂಜಾ,  ಎರಡು ಮೋಬೈಲ್ ಪೋನ್ ಮತ್ತು ಸುಮಾರು 50,000/- ರೂ ಮೌಲ್ಯದ ಮಾರುತಿ 800 ಕಾರನ್ನು  ಹಾಗೂ ಇದನ್ನು ಸಾಗಿಸುತ್ತಿದ್ದ  1] ಪಿ.ರಘು ಪ್ರಾಯ 36 ವರ್ಷ ತಂದೆ: ದಿವಂಗತ ಪುಟ್ಟೆ ಗೌಡ ವಾಸ:ಪ್ರಸಾದಿ ಹಳ್ಳಿ ಸನ್ಯಾಸಿ ಹಳ್ಳಿ ಅಂಚೆ ಬೇಲೂರು ತಾಲೂಕು ಹಾಸನ ಜಿಲ್ಲೆ ಮತ್ತು 2] ಪ್ರಕಾಶ್ ಪ್ರಾಯ 26 ವರ್ಷ ತಂದೆ: ಶಿವರಾಮ ವಾಸ: ರಣಘಟ್ಟ ಕಸಬಾ ಅಂಚೆ ಬೇಲೂರು ತಾಲೂಕು ಹಾಸನ ಜಿಲ್ಲೆ ಎಂಬವರನ್ನು  ವಶಕ್ಕೆ ಪಡೆದು ವಿಚಾರಿಸಲಾಗಿ ಆಪಾದಿತರುಗಳು ಸದ್ರಿ ಗಾಂಜಾವನ್ನು ಆಂದ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ಪಡೇರು ಎಂಬಲ್ಲಿಂದ  ತಂದಿರುವುದಾಗಿ ಒಪ್ಪಿಕೊಂಡಿರುತ್ತಾರೆ.

ಮಂಗಳೂರು ಪೊಲೀಸ್ ಕಮೀಷನರ್ ಶ್ರೀ ಟಿ ಆರ್ ಸುರೇಶ್ ರವರ ಆದೇಶದಂತೆ  ಕಾನೂನು ಮತ್ತು ಸುವ್ಯವಸ್ಥೆಯ ಡಿಸಿಪಿ ಶ್ರೀ ಹನುಮಂತರಾಯ, ಅಪರಾಧ ಹಾಗೂ ಸಂಚಾರ ವಿಭಾಗದ ಡಿಸಿಪಿರವರಾದ  ಶ್ರೀಮತಿ ಉಮಾ ಪ್ರಶಾಂತ್  ಹಾಗೂ ಕೇಂದ್ರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಉದಯ್ ಎಂ ನಾಯಕ್ ರವರ ಮಾರ್ಗದರ್ಶನದಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಾರುತಿ ಜಿ ನಾಯಕ ಹಾಗೂ ಪಿಎಸ್ ಐ (ಅಪರಾಧ) ಹರೀಶ್ ಹೆಚ್.ವಿ  ಹಾಗೂ ಸಿಬ್ಬಂದಿಗಳಾದ  ಎ.ಎಸ್.ಐ ಜನಾರ್ಧನ ,ಎ.ಎಸ್.ಐ ಮನೋಹರ ಹೆಚ್.ಸಿ  ಜಯಾನಂದ, ಹೆಚ್.ಸಿ   ವೆಂಕಟೇಶ್ , ಹೆಚ್.ಸಿ  ಗಿರೀಶ್ ಕುಮಾರ್ ,  ಹೆಚ್.ಸಿ   ಮಹೇಶ್,  ಹೆಚ್.ಸಿ   ಅಶಿತ್ ಕಿರಣ್ ಚಾಲಕ ಹೆಚ್.ಸಿ   ಅಜಿತ್ ಮ್ಯಾಥ್ಯೂ  ಆರೋಪಿ ಪತ್ತೆ ಕಾರ್ಯದಲ್ಲಿ ಬಾಗವಹಿಸಿದ್ದರು.

Leave a Reply

Your email address will not be published. Required fields are marked *