ಪತ್ರಿಕಾ ಪ್ರಕಟಣೆ

ದಿನಾಂಕ:19-07-2017 ರಂದು ಪಣಂಬೂರು ಠಾಣಾ ಎಎಸ್ಐ ಪುರಂದರ ಗೌಡ ಮತ್ತು ಹೆಚ್.ಸಿ ಸತೀಶ್ ರವರ ಮೇಲೆ ಕಾರನ್ನು ಚಲಾಯಿಸಿ ಕೊಲೆ ಮಾಡಲು ಪ್ರಯತ್ನಿಸಿದ ಪ್ರಕರಣಕ್ಕೆ ಸಂಬಂದಪಟ್ಟಂತೆ ಪಣಂಬೂರು ಠಾಣೆಯಲ್ಲಿ ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಯತ್ನ ಪ್ರಕರಣ ದಾಖಲಾಗಿ ತನಿಖೆಯಲ್ಲಿರುವುದಾಗಿದೆ
ಈ ಪ್ರಕರಣದ ತನಿಖೆಯನ್ನು ಕೈಗೊಂಡ ಪಣಂಬೂರು ಪೊಲೀಸು ಠಾಣಾ ಪೊಲೀಸು ನಿರೀಕ್ಷಕರಾದ ಶ್ರೀ ರಫೀಕ್ ಕೆ ಎಮ್ ಮತ್ತು ಅವರ ತಂಡ ಹಾಗೂ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿಯವರ ನೇತೃತ್ವದ ಬಜಪೆ ಪೊಲೀಸು ನಿರೀಕ್ಷಕರ ವಿಶೇಷ ಪೊಲೀಸು ತಂಡ ಪ್ರಕರಣದಲ್ಲಿ ಆರೋಪಿಗಳ ಪತ್ತೆಯ ಬಗ್ಗೆ ದಿನಾಂಕ 21-07-2017 ರಂದು ಪಣಂಬೂರ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳಾದ
1] ಹ್ಯಾರೀಸ್ @ ಚಂದು ಹ್ಯಾರೀಸ್ @ ಚಂದು 26 ವರ್ಷ, ಬೆಂಗ್ರೆ ಮಂಗಳೂರು
2] ಮೊಯಿದ್ದೀನ್ ಆದಿಲ್ @ ಆದಿಲ್ @ ಆದಿ 20 ವರ್ಷ, ಕಸ್ಬಾ ಬೆಂಗ್ರೆ ಮಂಗಳೂರು
ಎಂಬವರುಗಳನ್ನು ದಸ್ತಗಿರಿ ಮಾಡಿ ಅವರುಗಳಿಂದ ದ ಕ ಜಿಲ್ಲೆಯ ಬಂಟ್ವಾಳ ಗ್ರಾಮಾಂತರ ಠಾಣೆ ಮತ್ತು ಮಂಗಳೂರು ನಗರದ ಉತ್ತರ ಪೊಲೀಸು ಠಾಣೆ, ಮಂಗಳೂರು ದಕ್ಷಿಣ ಪೊಲೀಸು ಠಾಣೆ , ಸುರತ್ಕಲ್ ಪೊಲೀಸು ಠಾಣಾ ವ್ಯಾಪ್ತಿಯ ಒಟ್ಟು 4 ಮತ್ತು ಅಲ್ಲದೇ ಇತರ 3 ಪ್ರಕರಣಗಳಲ್ಲಿ ಸುಮಾರು 3,05,000/- ರೂ ಮೌಲ್ಯದ ಒಟ್ಟು 7 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುವುದಾಗಿದೆ. ಅಲ್ಲದೇ ಆರೋಪಿಗಳ ವಶದಿಂದ ಸುಮಾರು 25,000/- ರೂ ಮೌಲ್ಯದ 1 ಕೆ ಜಿ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಪಣಂಬೂರು ಠಾಣೆಯಲ್ಲಿ 3 ಪ್ರಕರಣ, ಮಂಗಳೂರು ದಕ್ಷಿಣ ಠಾಣೆಯಲ್ಲಿ 10 ಪ್ರಕರಣ , ಸುರತ್ಕಲ್ ಠಾಣೆಯಲ್ಲಿ 2 ಪ್ರಕರಣ ಬರ್ಕೆ ಠಾಣೆಯಲ್ಲಿ 2 ಮಂಗಳೂರು ಉತ್ತರ ಠಾಣೆಯಲ್ಲಿ 3 ಪ್ರಕರಣ ಒಟ್ಟು 20 ಹಳೆ ಪ್ರಕರಣಗಳು ದಾಖಲಾಗಿರುತ್ತವೆ.
ಈ ಪ್ರಕರಣದ ಪತ್ತೆ ಕಾರ್ಯಕ್ಕೆ ಮಂಗಳೂರು ನಗರದ ಮಾನ್ಯ ಪೊಲೀಸು ಆಯುಕ್ತರಾದ ಶ್ರೀ ಟಿ. ಆರ್ ಸುರೇಶ್ ಇವರ ನಿರ್ದೇಶನದಂತೆ ಮಂಗಳೂರು ನಗರ ಪೊಲೀಸ್ ಉಪ ಆಯುಕ್ತರುಗಳಾದ ಶ್ರೀ. ಕ ಎಮ್ ಶಾಂತರಾಜು ಮತ್ತು ಶ್ರೀ. ಹನುಮಂತರಾಯ ಇವರ ಮಾರ್ಗದರ್ಶನದಂತೆ ಮಂಗಳೂರು ಉತ್ತರ ವಿಭಾಗದ ಮಾನ್ಯ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ. ರಾಜೇಂದ್ರ ಡಿ ಎಸ್ ಇವರ ನೇತೃತ್ವ್ವದಲ್ಲಿ ಪಣಂಬೂರು ಠಾಣಾ ಪೊಲೀಸು ನಿರೀಕ್ಷಕರಾದ ಶ್ರೀ ರಫೀಕ್ ಕೆ ಎಮ್ ಹಾಗೂ ಪೊಲೀಸು ಉಪ ನಿರೀಕ್ಷಕರಾದ ಶ್ರೀ ಕುಮರೇಶನ್ , ಶ್ರೀಮತಿ ಸುಂದರಿ ಎಎಸ್ಐ ಶ್ರೀ ಪುರಂದರ್, ಅಶೋಕ್ ಕುಮಾರ್ ಸಿಬ್ಬಂದಿಗಳಾದ ಕುಶಲ ಮಣಿಯಾಣಿ, ಸತೀಶ್, ಇಸಾಕ್, ರಾಧಾಕೃಷ್ಣ, ಚಂದ್ರಹಾಸ ಆಳ್ವ, ಜಗದೀಶ್, ಪದ್ಮನಾಭ, ಕಮಲಾಕ್ಷ, ಸುರೇಶ್, ಕುಮಾರ್ ಪೂಜಾರ್, ಸತೀಶ್, ಮೋಹನ್ದಾಸ್ ಆಳ್ವ, ಉದಯ ಕುಮಾರ್ ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿಯವರ ನೇತೃತ್ವದ ಬಜಪೆ ಪೊಲೀಸು ನಿರೀಕ್ಷಕರ ವಿಶೇಷ ಪೊಲೀಸು ತಂಡ ಇವರುಗಳ ಪರಿಶ್ರಮದಿಂದ ಪ್ರಕರಣ ಪತ್ತೆಮಾಡಲಾಗಿದೆ.

Leave a Reply

Your email address will not be published. Required fields are marked *