ಪತ್ರಿಕಾ ಪ್ರಕಟಣೆ

ಧನರಾಜ್ ಪೂಜಾರಿ @ ಧನು ಪ್ರಾಯ: 23 ವರ್ಷ, ತಂದೆ: ಗೋಪಾಲ ಪೂಜಾರಿ ವಾಸ: ಅರ್ಕುಳ ಗ್ರಾಮ, ಪರಂಗಿಪೇಟೆ ಅಂಚೆ, ಮಂಗಳೂರು ಎಂಬಾತನು ಮಂಗಳೂರು ಉತ್ತರ ಪೊಲೀಸ್ ಠಾಣಾ ಅ.ಕ್ರ 72/2016 ಕಲಂ 143, 341, 323, 307 ಜೊತೆಗೆ 149 ಐ.ಪಿ.ಸಿ ಪ್ರಕರಣದಲ್ಲಿ ಕೊಲೆಗೆ ಯತ್ನ ನಡೆಸಿ ದಸ್ತಗಿರಿಯಾಗಿ ನ್ಯಾಯಾಂಗ ಬಂಧನದಲ್ಲಿದಾತನಿಗೆ ಮಾನ್ಯ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದ್ದು, ನಂತರ ಮಂಗಳೂರು ಉತ್ತರ ಪೊಲೀಸ್ ಠಾಣಾ ಅ.ಕ್ರ 77/2017 ಕಲಂ 201 341, 114, 326, 307 ಜೊತೆಗೆ 34 ಐಪಿಸಿ ಪ್ರಕರಣದಲ್ಲಿ ಭಾಗಿಯಾಗಿ ನ್ಯಾಯಾಂಗ ಬಂಧನದಲ್ಲಿದ್ದು, ಬಂದರು ಪೊಲೀಸ್ ಠಾಣಾ ಠಾಣಾಧಿಕಾರಿಯವರು ಠಾಣಾ ಅ.ಕ್ರ 72/2016 ರಲ್ಲಿ ಜಾಮೀನು ರದ್ದು ಪಡಿಸುವಂತೆ ಮಾನ್ಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಮಂಗಳೂರು ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿದ್ದು, ಘನ ನ್ಯಾಯಾಲಯವು ಮನವಿಯನ್ನು ಪುರಸ್ಕರಿಸಿ ಆತನ ಜಾಮೀನನ್ನು ರದ್ದು ಪಡಿಸಿರುತ್ತಾರೆ.

Leave a Reply

Your email address will not be published. Required fields are marked *