ಪತ್ರಿಕಾ ಪ್ರಕಟಣೆ (ದಿನಾಂಕ 24-02-2019)

ಮಂಗಳೂರು ನಗರದಲ್ಲಿ ಇತ್ತೀಚೆಗೆ ನಡೆದ ಕೆಲವು ಘಟನೆಗಳ ಹಿನ್ನಲೆಯಲ್ಲಿ ಈ ದಿನ ದಿನಾಂಕ 24-02-2019 ರಂದು ಬೆಳಗ್ಗೆ ಸುಮಾರು 08-00 ಗಂಟೆಗೆ ಪೊಲೀಸ್ ಆಯುಕ್ತರು ಮಂಗಳೂರು ನಗರ ಇವರ ನೇತೃತ್ವದಲ್ಲಿ ಮಂಗಳೂರು ಜಿಲ್ಲಾ ಕಾರಗೃಹದ ದಿಢೀರ್ ತಪಾಸಣೆ ನಡೆಸಿದಾಗ ಕೈದಿಗಳು ಉಪಯೋಗಿಸುತ್ತಿದ್ದ ಆರು(6) ಮೊಬೈಲ್ ಹಾಗೂ ಮೂರು(3) ಮೊನಚಾದ ಚಾಕುಗಳು ಪತ್ತೆಯಾಗಿರುತ್ತವೆ. ಈ ಎಲ್ಲಾ ಸೊತ್ತುಗಳನ್ನು ವಶವಡಿಸಿಕೊಳ್ಳಲಾಯಿತು ಹಾಗೂ ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಇನ್ನುಮುಂದೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮಕೈಗೊಳ್ಳಲಾಗುವುದು.

ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಉಪ ಪೊಲೀಸ್ ಆಯುಕ್ತರು (ಕಾನೂನು ಮತ್ತು ಸುವ್ಯವಸ್ಥೆ), ಉಪ ಪೊಲೀಸ್ ಆಯುಕ್ತರು (ಅಪರಾಧ ಮತ್ತು ಸಂಚಾರ), ಸಹಾಯ ಪೊಲೀಸ್ ಆಯುಕ್ತರು ಮಂಗಳೂರು ಉತ್ತರ ಉಪ ವಿಭಾಗ, ಸಹಾಯ ಪೊಲೀಸ್ ಆಯುಕ್ತರು ನಗರ ಸಶಸ್ತ್ರ ವಿಭಾಗ, ಸಹಾಯಕ ಪೊಲೀಸ್ ಆಯುಕ್ತರು ಸಂಚಾರ ಉಪ ವಿಭಾಗ, ಪೊಲೀಸ್ ನಿರೀಕ್ಷಕರು ಕಾವೂರು ಹಾಗೂ ಪಣಂಬೂರು ಪೊಲೀಸ್ ಠಾಣೆ ಹಾಗೂ ಇನ್ನೀತರ ಅಧಿಕಾರಿ ಹಾಗೂ ಸಿಬ್ಬಂದಿಗಳು ಈ ತಪಾಸಣೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *