ನಾಗರೀಕ ಬಂದೂಕು ತರಬೇತಿಗೆ ಅರ್ಜಿ ಆಹ್ವಾನ

ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ನಾಗರಿಕ ಬಂದೂಕು ತರಬೇತಿಯನ್ನು ನಡೆಸಲು ಉದ್ದೇಶಿಸಲಾಗಿದ್ದು, ಆಸಕ್ತಿಯುಳ್ಳ ನಾಗರಿಕರು ಕೂಡಲೇ ಸಹಾಯಕ ಪೊಲೀಸ್ ಆಯುಕ್ತರು, ನಗರ ಸಶಸ್ತ್ರ ಮೀಸಲು ಪಡೆ, ಮಂಗಳೂರು ರವರಿಂದ ಅರ್ಜಿ ನಮೂನೆಯನ್ನು ಪಡೆದು ವಾಸ್ತವ್ಯ ದೃಢೀಕರಣದ ಬಗ್ಗೆ ಠಾಣೆಯಿಂದ ಪರಿಶೀಲನೆ ನಡೆಸಿ 04ಪಾಸ್’ಪೋರ್ಟ್ ಸೈಜ್ ಬಾವಚಿತ್ರದೊಂದಿಗೆ ಉಪ ಪೊಲೀಸ್ ಆಯುಕ್ತರು, ನಗರ ಸಶಸ್ತ್ರ ಮೀಸಲು ಪಡೆ, ಮಂಗಳೂರು ಇವರ ಕಛೇರಿಗೆ ದಿನಾಂಕ 31-05-2018 ರೊಳಗಾಗಿ ಸಲ್ಲಿಸುವುದು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0824-2220825 ಗೆ ಸಂಪರ್ಕಿಸುವುದು.

Leave a Reply

Your email address will not be published. Required fields are marked *