ನಾಗರೀಕ ಪೊಲೀಸ್ ಕಾನ್ಸ್’ಟೇಬಲ್ 2017, (ಪುರುಷ & ಮಹಿಳಾ) ನೇಮಕಾತಿ – 2017 ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಅರ್ಹರಾದ ಅಭ್ಯರ್ಥಿಗಳಿಗೆ ವೈದ್ಯಕೀಯ ಪರಿಕ್ಷೆ

ನಾಗರೀಕ ಪೊಲೀಸ್ ಕಾನ್ಸ್’ಟೇಬಲ್ 2017, (ಪುರುಷ & ಮಹಿಳಾ) ನೇಮಕಾತಿ – 2017, ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಅರ್ಹರಾದ ಅಭ್ಯರ್ಥಿಗಳಿಗೆ ವೈದ್ಯಕೀಯ ಪರಿಕ್ಷೆ ಮಾಡುವ ಬಗ್ಗೆ ಈ ಕೆಳಗಿನ ಲಿಂಕ್’ನಲ್ಲಿ ನಮೂದಿಸಿರುವ ಅಭ್ಯರ್ಥಿಗಳಿಗೆ ಅಲ್ಲಿ ಸೂಚಿಸಲಾದ ದಿನಾಂಕದಂದು ವೈದ್ಯಕೀಯ ಪರೀಕ್ಷೆಗೆ ಪೊಲೀಸ್ ಆಯುಕ್ತರ ಕಛೇರಿ, ಮಂಗಳೂರು ನಗರ ಇಲ್ಲಿ ಖುದ್ದು ಹಾಜರಾಗಲು ಸೂಚಿಸಲಾಗಿದೆ

Notification

ಅಭ್ಯರ್ಥಿಗಳು ವೈದ್ಯಕೀಯ ಪರೀಕ್ಷೆಗೆ ಹಾಜರಾಗುವ ಮುನ್ನ ಕರೆಪತ್ರದೊಂದಿಗೆ ಈ ಕೆಳಕಂಡ ಎಲ್ಲಾ ಮೂಲ ದಾಖಲಾತಿಗಳನ್ನು ಕಡ್ಡಾಯವಾಗಿ ತಮ್ಮೊಂದಿಗೆ ತರತಕ್ಕದ್ದು.

1)            ಎಸ್.ಎಸ್.ಎಲ್.ಸಿ ಅಂಕಪಟ್ಟಿ (ಜನ್ಮ ದಿನಾಂಕ ಧೃಡೀಕರಣಕ್ಕಾಗಿ)/ನಿಗದಿತ ದಿನಾಂಕದೊಳಗಿರುವ ಎಲ್ಲಾ ಮೂಲ ಮೀಸಲಾತಿ ಪ್ರಮಾಣ ಪತ್ರಗಳು/ಪಿಯುಸಿ/ತತ್ಸಮಾನ ವಿದ್ಯಾರ್ಹತೆ ಪ್ರಮಾಣ ಪತ್ರ/ ಜಾತಿ ಮತ್ತು ಆದಾಯ ಪ್ರಮಾಣ ಪತ್ರ/ಗ್ರಾಮೀಣ ಮತ್ತು ಕನ್ನಡ ಮಾಧ್ಯಮ/ಯೋಜನಾ ನಿರಾಶ್ರಿತ /ಮಾಜಿ ಸೈನಿಕ/ ಸೇವಾ ನಿರಾಕ್ಷೇಪಣಾ ಪತ್ರ/ ಹಾಗೂ ಇನ್ನಿ ಅವಶ್ಯಕ ದಾಖಲಾತಿಗಳು.

2)            ಇತ್ತೀಚಿನ ಪಾಸ್’ಪೊರ್ಟ್ ಅಳತೆಯ 02 ಭಾವಚಿತ್ರಗಳನ್ನು ತರತಕ್ಕದ್ದು. ಗುರುತಿನ ಚೀಟಿ (ಆಧಾರ್ ಕಾರ್ಡ/ಪಡಿತರ ಚೀಟಿ/ ಚಾಲನಾ ಪರವಾನಗಿ/ಮತದಾರರ ಗುರುತಿನ ಚೀಟಿ/ಪಾಸ್ಪೋರ್ಟ ಹಾಗೂ  ನೇಮಕಾತಿ ಸಮಿತಿ ವಿವೇಚನಾಧಿಕಾರಕ್ಕೆ ಒಳಪಟ್ಟ ನಂಬಲರ್ಹವಾದ ದಾಖಲಾತಿಗಳು)

3)            ವೈದ್ಯಕೀಯ ಪರೀಕ್ಷೆಗೆ ತಗಲುವ ವೆಚ್ಚವನ್ನು ನಿಯಮಗಳನುಸಾರ ಅಭ್ಯರ್ಥಿಗಳೇ ಸ್ವತಃ ಭರಿಸಬೇಕಾಗಿರುತ್ತದೆ (ಅಂದಾಜು ರೂ.300/-)

4)            ವೈದ್ಯಕೀಯ ಪರೀಕ್ಷೆಗೆ ಗೈರುಹಾಜರಾಗುವ ಅಭ್ಯರ್ಥಿಗಳಿಗೆ ಯಾವುದೇ ಕಾರಣಕ್ಕೂ ಪರ್ಯಾಯ ದಿನಗಳ ಅವಕಾಶವನ್ನು ನೀಡಲಾಗುವುದಿಲ್ಲ. ಅಂತಹ ಅಭ್ಯರ್ಥಿಗಳನ್ನು ಗೈರು ಹಾಜರೆಂದು ಪರಿಗಣಿಸಲಾಗುವುದು.

5)            ಎಲ್ಲಾ ಪರೀಕ್ಷೆಗಳನ್ನು ವೃಂದ ಮತ್ತು ನೇಮಕಾತಿ (ತಿದ್ದುಪಡಿ) ನಿಯಮಗಳು-2009 ರನುಸಾರವಾಗಿ ನಡೆಸಲಾಗುವುದು. ವೈದ್ಯಕೀಯ ಮಂಡಳಿಯು ಅಭ್ಯರ್ಥಿಯ ಸಧೃಢತಾ ಪ್ರಮಾಣಪತ ನೀಡದ ಹೊರತು ನೇಮಕಾತಿಯ ಅರ್ಹತೆಗೆ ಪರಿಗಣಿಸಲಾಗುವುದಿಲ್ಲ್ಲ.

6)            ಸ್ವಯಂ ದೃಡೀಕರಿಸಿದ ಎಲ್ಲಾ ದಾಖಲೆಗಳ ಜೆರಾಕ್ಸ್  ಪ್ರತಿಗಳು (ಎರಡು/ದ್ವಿ ಪ್ರತಿಗಳಲ್ಲಿ)

Leave a Reply

Your email address will not be published. Required fields are marked *