ನಕಲಿ ಕೀ ಬಳಸಿ ಬೈಕ್ ಕಳ್ಳತನ ಮಾಡಿದ ಆರೋಪಿಯ ಬಂಧನ

ಮಂಗಳೂರು ಕದ್ರಿ ಪೂರ್ವ ಠಾಣೆಯ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಮಾಡಿದ ಶಕ್ತಿನಗರ ರಮಾಶಕ್ತಿ ಮಿಷನ್ ನಿವಾಸಿ ಪ್ರಶಾಂತ್ ಕೆ.ಎನ್  ಎಂಬಾತನನ್ನು ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಪೊಲೀಸರು  ಬಂಧಿಸಿ ಆತನಿಂದ  ಕಳ್ಳತನ ಮಾಡಿದ ಸುಮಾರು ರೂ 30,000/- ಮೌಲ್ಯದ ಒಂದು  ಬೈಕನ್ನು ವಶ ಪಡಿಸಿ ಕೊಂಡಿರುತ್ತಾರೆ.

ಬಂದಿತ ಆರೋಪಿ: ಪ್ರಶಾಂತ್ ಕೆ.ಎನ್ ಪ್ರಾಯ: 38 ವರ್ಷ ತಂದೆ: ನಾರಾಯಣ, ವಾಸ: ಕೇರಾಫ್ ಪ್ರಭಾಕರ ಟೈಲರ್, ರಾಮಶಕ್ತಿ ಮಿಷನ್ ಶಕ್ತಿನಗರ, ಮಂಗಳೂರು. ಖಾಯಂ ವಾಸ: ಕಾಯರ್ ತೋಡಿ ಮನೆ,  ದೇವಸ್ಥಾನದ ಹತ್ತಿರ, ಗಾಂಧಿನಗರ, ಸುಳ್ಯ ದ.ಕ

ಈತನು  ದಿನಾಂಕ:  29-10-2017 ರಂದು ಮಂಗಳೂರು ಯೆಯ್ಯಾಡಿಯ ಮಧುವನ್ ಬಾರ್ & ರೆಸ್ಟೋರೆಂಟ್ ನ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ಬೈಕ್ ನ್ನು ನಕಲಿ ಕೀ ಬಳಸಿ ಬೈಕನ್ನು ಕಳ್ಳತನ ಮಾಡಿದ್ದು,   ಬೈಕ್ ಕಳ್ಳತನ ಮಾಡಿದ ಆರೋಪಿ ಪ್ರಶಾಂತ್ ನನ್ನು  ಪತ್ತೆ ಮಾಡಿ  ಆತನಿಂದ ಸುಮಾರು ರೂ: 30,000/- ಬೆಲೆ ಬಾಳುವ ಬಜಾಜ್ ಮೋಟಾರು ಸೈಕಲ್ ಮತ್ತು ಆರೋಪಿಯು ಕೃತ್ಯಕ್ಕೆ ಬಳಸಿದ  ಸುಮಾರು 15,000/- ಬೈಕನ್ನು ಪೊಲೀಸರು ವಶ ಪಡಿಸಿ ಕೊಂಡಿರುತ್ತಾರೆ. ಆರೋಪಿಯು ಮೂಲತಃ ಸುಳ್ಯ ಕಾಯರ್ ತೋಡಿ ನಿವಾಸಿಯಾಗಿದ್ದು, ಈತನ ಮೇಲೆ ಸುಳ್ಯ ಠಾಣೆಯಲ್ಲಿ ಬೈಕ್ ಕಳ್ಳತನ ಕೇಸು ಇರುತ್ತದೆ.

ಮಂಗಳೂರು ಕೇಂದ್ರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಉದಯ್ ಎಂ ನಾಯಕ್, ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಾರುತಿ ಜಿ ನಾಯಕ್ ರವರ ಮಾರ್ಗದರ್ಶನದಲ್ಲಿ ಮಂಗಳೂರು ಪೂರ್ವ ಠಾಣೆಯ ಅಪರಾಧ ವಿಭಾಗ ದ ಪಿಎಸ್ಐ ಹರೀಶ್ ಹೆಚ್ ವಿ, ಸಿಬ್ಬಂದಿಗಳಾದ ವೆಂಕಟೇಶ್, ಉಮೇಶ್, ಜಯಾನಂದ, ಪ್ರಶಾಂತ್ ಶೆಟ್ಟಿ, ಗಿರೀಶ್ ಜೋಗಿ, ರಾಘವೇಂದ್ರ ರವರು  ಆರೋಪಿ ಪತ್ತೆ ಕಾರ್ಯದಲ್ಲಿ ಬಾಗವಹಿಸಿದ್ದರು.

Leave a Reply

Your email address will not be published. Required fields are marked *