ದರೋಡೆ, ಸುಲಿಗೆ ಮತ್ತು ಕಳ್ಳತನದ ಆರೋಪಿಗಳ ಬಂಧನ

ಪಣಂಬೂರು ಪೊಲೀಸು ಠಾಣಾ ವ್ಯಾಪ್ತಿಯ ಬೈಕಂಪಾಡಿ ಅಂಗರಗುಂಡಿ ರೈಲ್ವೇ ಟ್ರಾಕಿನಲ್ಲಿ ನಡೆದುಕೊಂಡು ಹೋಗುವ ಕೂಲಿ ಕಾರ್ಮಿಕರನ್ನು ಹಲ್ಲೆ ನಡೆಸಿ ದರೋಡೆ ಮತ್ತು ಸುಲಿಗೆ ನಡೆಸಿದ ಬಗ್ಗೆ   ಪಣಂಬೂರು ಪೊಲೀಸು ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿರುವುದಾಗಿದೆ

ಈ ಪ್ರಕರಣದ ತನಿಖೆಯನ್ನು ಕೈಗೊಂಡ ಪಣಂಬೂರು ಪೊಲೀಸು ಠಾಣಾ ಪೊಲೀಸು ನಿರೀಕ್ಷಕರಾದ ಶ್ರೀ ರಫೀಕ್ ಕೆ ಎಮ್ ಮತ್ತು ಪಿಎಸ್ಐ ಕ್ರೈಮ್ ಶ್ರೀ ಕುಮರೇಶನ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆರೋಪಿಗಳಾದ ಸರ್ಫರಾಜ್ @ ಚಪ್ಪು 24 ವರ್ಷ ತಂದೆ: ರಫೀಕ್ ವಾಸ: ಕಸ್ಬಾ ಬೆಂಗ್ರೆ ಮಂಗಳೂರು ಮತ್ತು ಸೈಫುಲ್ಲ ಫರಾಜ್ @ ಪುತ್ತ 19 ವರ್ಷ ತಂದೆ: ಅಬೂಬಕ್ಕರ್ ಸಿದ್ದಿಕ್ ವಾಸ: ಝೀನತ್ ಮಂಜಿಲ್ ಜುಮಾದಿ ಗುಡ್ಡೆ ಪಂಚಾಯತು ಆಫೀಸಿನ ಬಳಿ ಫರಂಗೀಪೇಟೆ ಎಂಬವರುಗಳನ್ನು ಬೈಕಂಪಾಡಿ ಶಬರಿ ಗ್ಯಾರೇಜ್ ಬಳಿ ದಸ್ತಗಿರಿ ಮಾಡಿ ಅವರುಗಳಿಂದ ಒಂದು ಸುಲಿಗೆ, ಒಂದು ದರೋಡೆ ಪ್ರಕರಣಕ್ಕೆ ಸಂಬಂಧಿಸಿದ ಸುಮಾರು 9000/- ರೂ ಮೌಲ್ಯದ ಎರಡು ಮೊಬೈಗಳು ಮತ್ತು ಒಂದು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ 7,000/- ರೂ ಮೌಲ್ಯದ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ.

Leave a Reply

Your email address will not be published. Required fields are marked *