ಗಾಂಜಾ ಮಾರಾಟ ಮಾಡುತ್ತಿದ್ದವರ ವ್ಯಕ್ತಿಗಳ ಬಂಧನ

ಮಂಗಳೂರು ನಗರದಲ್ಲಿ ತಲಾಪಾಡಿ ಎಂಬಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದವರ   ಜಾಲವನ್ನು ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳ ಅಧಿಕಾರಿ ಮತ್ತು ರೌಡಿ ನಿಗ್ರಹದಳದ ತಂಡದವರು ಬೇಧಿಸಿ ದಸ್ತಗಿರಿ ಮಾಡುವಲ್ಲಿ ಯಶ್ವಸ್ವಿಯಾಗಿರುತ್ತಾರೆ.

ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹದಳದ ಸಹಾಯಕ ಪೊಲೀಸ್ ಆಯುಕ್ತರಿಗೆ ಮಂಗಳೂ ನಗರದ ತಲಪಾಡಿ ಎಂಬಲ್ಲಿ ಸರ್ವಾಜನಿಕರಿಗೆ ಗಾಂಜಾ  ಮಾರಾಟ ಮಾಡುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಈ ಕೆಳಕಂಡ  ಆರೋಪಿಗಳನ್ನು ದಸ್ತಗಿರಿ ಮಾಡಿರುವುದಾಗಿದೆ.

ದಸ್ತಗಿರಿ ಮಾಡಿದ ಆರೋಪಿಗಳ ವಿವರ :-

1)  ಉಸ್ಮಾನ್  ಯಾನೆ ಪಿಲ್ಟರ್ ಉಸ್ಮಾನ್ ಪ್ರಾಯ 38 ತಂದೆ ಅಬ್ದುಲಾ ವಾಸ,ಆನಂಗುರು ಮೆಹಾಬು ಮನೆ ಮತ್ತು ಕಾಸರಗೋಡು ಜಿಲ್ಲಾ ಕೇರಳ ರಾಜ್ಯ

  1. ಮಮ್ಮು ಬ್ಯಾರಿ @ ಮಹಮ್ಮದ್ ಬ್ಯಾರಿ (55) ತಂದೆ ಇಸ್ಮಾಯಿಲ್ ಬ್ಯಾರಿ, ಪಲಹಾ ಶಾಲೆ ಹಿಂದುಗಡೆ, ಹೊಸನಗರ, ತಲಪಾಡಿ,ಮಂಗಳೂರು.

ಆರೋಪಿತರು ಹೊಂದಿದ್ದ ಒಂದೂವರೆ ಕೆ.ಜಿ ಗಾಂಜಾ ವಶಪಡಿಸಿಕೊಂಡ ಮತ್ತು ಇತರ  ಸೊತ್ತುಗಳ ಒಟ್ಟು ಮೌಲ್ಯ ರೂ.35,000/ ಆಗಬಹುದು.ಇವರನ್ನು  ಮುಂದಿನ ಕ್ರಮದ ಬಗ್ಗೆ  ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಿ ಪ್ರಕರಣ ದಾಖಲಾಗಿರುತ್ತದೆ.

ಮೇಲ್ಕಂಡ  1 ಆರೋಪಿ ನೇ ಉಸ್ಮಾನ್ನ  ವಿರುದ್ದ ಈಗಾಗಲೇ ಕೇರಳ ರಾಜ್ಯದ ಕಾಸರಗೋಡಿನಲ್ಲಿ ಗಾಂಜಾ ಸಾಗಾಟ ಪ್ರಕರಣಗಳಿರುತ್ತದೆ. ಅದೇ ರೀತಿ 2 ನೇ ಆರೋಪಿ ಮಮ್ಮು ಬ್ಯಾರಿ ಎಂಬಾತನನ್ನು ಒಂದು ತಿಂಗಳ ಹಿಂದೆ ತಲಪಾಡಿಯಲ್ಲಿ ಗಾಂಜಾ ಸಾಗಾಟ ನಡೆಸುತ್ತಿದ್ದ ಸಮಯ ದಕ್ಷಿಣ ರೌಡಿ ನಿಗ್ರಹದಳದವರು ಪತ್ತೆ ಮಾಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಟಿ.ಆರ್‌.ಸುರೇಶ್, ಐ.ಪಿ.ಎಸ್. ರವರ ನಿರ್ದೇಶನದಂತೆ, ಮಾನ್ಯರಾದ ಶ್ರೀ ಹನುಮಂತರಾಯ (ಐಪಿಎಸ್‌) ಡಿ.ಸಿ.ಪಿ (ಕಾನೂನು ಮತ್ತು ಸುವ್ಯವಸ್ಥೆ) ಮತ್ತು  ಶ್ರೀಮತಿ ಉಮಾ ಪ್ರಶಾಂತ್, ಡಿ.ಸಿ.ಪಿ (ಅಪರಾಧ ಮತ್ತು ಸಂಚಾರ ವಿಭಾಗ) ರವರ ಮಾರ್ಗದರ್ಶನದಲ್ಲಿ  ಮಂಗಳೂರು ರೌಡಿ ನಿಗ್ರಹ ದಳದ ಎ.ಸಿ.ಪಿ. ರಾಮರಾವ್, ಉಳ್ಳಾಲ ಠಾಣಾ ಪಿ.ಎಸ್.ಐ. ಶ್ರೀ ವಿನಾಯಕ ಮತ್ತು ರೌಡಿ ನಿಗ್ರಹ ದಳದ ಸಿಬ್ಬಂದಿಯವರು ಪತ್ತೆ ಕಾರ್ಯದಲ್ಲಿ ಬಾಗವಹಿಸಿದ್ದಾರೆ.

Leave a Reply

Your email address will not be published. Required fields are marked *