ಗಾಂಜಾ ಮಾರಾಟ ಮಾಡುತಿದ್ದ ವ್ಯಕ್ತಿಗಳ ಬಂಧನ

ಮಂಗಳೂರು ನಗರ ಬಿಜೈ ಪರಿಸರದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ  ಮಾದಕ ವಸ್ತುವಾದ ಗಾಂಜಾ ಮಾರಾಟ ಮಾಡುತಿದ್ದವರನ್ನು ದಸ್ತಗಿರಿ ಮಾಡುವಲ್ಲಿ ಮಂಗಳೂರು ದಕ್ಷಿಣ ರೌಡಿ ನಿಗ್ರಹದ ದಳದ  ಪೊಲೀಸರು ಯಶಸ್ವಿಯಾಗಿರುತ್ತಾರೆ.

ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹ ದಳದ ಮತ್ತು ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಿಗೆ ಮಂಗಳೂರು ನಗರದ ಬಿಜೈ ರಾಮ ಮಂದಿರದ ಬಳಿಯಲ್ಲಿರುವ ತಿರುಮೇಲೇಶ್ ಎಂಬ ಮನೆಯಲ್ಲಿ ರೋಶನ್ ಎಂಬವರು ಗಾಂಜಾವನ್ನು ತಂದು, ಪ್ಯಾಕೇಟ್ ಮಾಡಿ, ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಅಲ್ಲದೆ ಕೆಲವೊಂದು ಗಿರಾಕಿಗಳ ಮೂಲಕ ಬೇರೆ ಗಿರಾಕಿಗಳಿಗೆ ಮಾರಾಟ ಮಾಡಿಸುತ್ತಾರೆ, ಗಿರಾಕಿಗಳು ಅವರ ಮನೆಗೆ ಬಂದು ಗಾಂಜಾವನ್ನು ತೆಗೆದುಕೊಂಡು ಹೋಗುತ್ತಾರೆ ಎಂಬುದಾಗಿ ಖಚಿತ ಮಾಹಿತಿ ಮೇರೆಗೆ ಮನೆಗೆ ದಾಳಿ ಮಾಡಿ

1) ರೋಶನ್ ವೇಗಸ್, 23 ವರ್ಷ, ತಂದೆ: ಸಿಪ್ರಿಯನ್ ವೇಗಸ್, ವಾಸ: ಕೂಳೂರು ಬಳ್ಳಿ ಮನೆ, ಚರ್ಚ್‌ನ ಬಳಿ, ಮಂಗಳೂರು ತಾಲೂಕು

2 ಅನಿಲ್ ಡಿ ಸೋಜ, 45 ವರ್ಷ, ತಂದೆ: ದಿ: ಜೋಕಿಂ ಡಿ ಸೋಜ, ನಾಗಬನದ ಬಳಿ, ರಾಮ ಮಂದಿರ ರಸ್ತೆ, ಬಿಜೈ, ಮಂಗಳೂರು ಎಂದೂ ತಿಳಿಸಿದ್ದು,

3 ಮೆಲ್ವಿನ್ ರೋಹಿತ್, 22 ವರ್ಷ, ತಂದೆ: ರೈಮಂಡ್ ಮೊಂತೆರೋ, ವಾಸ: ಯೆಯ್ಯಾಡಿ ಜಂಕ್ಷನ್ ಬಳಿ, ಮೈನ್ ರೋಡ್, ಯೆಯ್ಯಾಡಿ, ಮಂಗಳೂರು.

4 ರಕ್ಷಿತ್ ಶೆಟ್ಟಿ (21),ತಂದೆ: ಪ್ರಭಾಕರ ಶೆಟ್ಟಿ,ವಾಸ:ಸಂತೃಪ್ತಿ ಪ್ರಿಯಾ ಮನೆ, ಆಂಜನೇಯಾ ಭಜನಾ ಮಂದಿರ,ಕಂಡೆಟ್ಟು,ಬಿಕರ್ನಕಟ್ಟೆ,ಮಂಗಳೂರು

  1. ಯಜ್ಞೇಶ ಶೆಟ್ಟಿ, 21 ವರ್ಷ, ತಂದೆ: ಲೋಕನಾಥ ಶೆಟ್ಟಿ, ವಾಸ: ಗೀತಾಂಜಲಿ ಎದುರು, ಬೆಂದೂರವೆಲ್, ಮಂಗಳೂರು.

ಸದ್ರಿ ಮನೆಯಲ್ಲಿ ಮಾರಾಟಕ್ಕೆ ಇಟ್ಟಿದ್ದ 61 ಗಾಂಜಾ ಪ್ಯಾಕೇಟುಗಳು ಮತ್ತು ಬಿಡಿ(ಲೂಸ್) ಸೇರಿ ಒಟ್ಟು 2.200 ಕಿ.ಗ್ರಾಂ ಗಾಂಜಾ, 5 ಮೊಬೈಲ್ ಫೋನ್ ಮತ್ತು ನಗದು ರೂ.2390/- ಪತ್ತೆಯಾಗಿದ್ದು ಇವುಗಳನ್ನು ವಶಪಡಿಸಿಕೊಳ್ಳಲಾಗಿದೆ.     ವಶಪಡಿಸಿಕೊಳ್ಳಲಾದ  ಸೊತ್ತಿನ ಒಟ್ಟು ಮೌಲ್ಯ ಸುಮಾರು ರೂ.78,390/- ವಾಗಿರುತ್ತದೆ., ವಿಚಾರಿಸಿದಾಗ ಆರೋಪಿಗಳು ಸುಮಾರು ಎರಡು ವರ್ಷದಿಂದ ತೀರ್ಥಹಳ್ಳಿಯಿಂದ ಗಾಂಜಾವನ್ನು ತಂದು, ಪ್ಯಾಕೇಟ್ ಮಾಡಿ, ಅದನ್ನು  ಸಾರ್ವಜನಿಕರಿಗೆ ಮತ್ತು ನಗರ ಕಾಲೇಜಿನ  ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವುದಾಗಿ ವಿಚಾರಣೆಯ ವೇಳೆ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *