ಕೋಣಾಜೆ ಠಾಣಾ ಪ್ರಕರಣದ ಆರೋಪಿಗೆ ಮಾನ್ಯ ಎಸ್.ಸಿ.ಜೆ(ಹಿ.ವಿ) & ಜೆ.ಎಂ.ಎಫ್.ಸಿ ಬಂಟ್ವಾಳ ನ್ಯಾಯಾಲಯದಿಂದ ಸಜೆ

ದಿನಾಂಕ 16-10-2013 ರಂದು ಮುಡಿಪು ಹಾಲು ಉತ್ಪಾದಕರ ಸಂಘದಲ್ಲಿ ದೂರುದಾರರಾದ ಹೇಮಂತ ಮಿತ್ತಕೋಡಿ ಎಂಬವರು ಹಾಲನ್ನು ಸಂಗ್ರಹಿಸುತ್ತಿದ್ದಾಗ ಅಲ್ಲಿಗೆ ವ್ಯಾನ್‌ನಲ್ಲಿ ಹಾಲು ತೆಗೆದುಕೊಂಡು ಬಂದ ಬೋಳಿಯಾರ್ ವಾದಿರಾಜ್ ಎಂಬಾತನು ತಂದ ಹಾಲಿನ ಗುಣಮಟ್ಟವನ್ನು ಡಿಗ್ರಿಯಲ್ಲಿ ಅಳೆದು ಡಿಗ್ರಿ ಇಲ್ಲ ಎಂದು ವಾಪಾಸು ಕೊಟ್ಟಾಗ ಕೋಪಗೊಂಡ ವಾದಿರಾಜ್‌ರವರು ಹಾಲನ್ನು ಅಲ್ಲೇ ಚೆಲ್ಲಿ ಹೇಮಂತ್‌ರವರ ಎಡ ಕೈಯನ್ನು ತಿರುಗಿಸಿ ದೂಡಿದ ಪರಿಣಾಮ ಹೇಮಂತ್‌ರವರಿಗೆ ಕೈಯ ಕೀಲು ಮುರಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಪ್ರಕರಣದಲ್ಲಿ ಮಾನ್ಯ ಎಸ್.ಸಿ.ಜೆ(ಹಿ.ವಿ)& ಜೆ.ಎಂ.ಎಫ್.ಸಿ ಬಂಟ್ವಾಳ ನ್ಯಾಯಾಲಯದಲ್ಲಿ ಸಾಕ್ಷಿದಾರರ ವಿಚಾರಣೆಯಾಗಿ ಆರೋಪಿಗೆ ಮಾನ್ಯ ನ್ಯಾಯಾಲಯವು ಒಂದು ವರ್ಷ ಸಜೆ ಮತ್ತು ರೂ 5,000/- ದಂಡವನ್ನು ವಿಧಿಸಿ ಅಂತಿಮ ತೀರ್ಪಿನ ಆದೇಶವನ್ನು ಹೊರಡಿಸಿರುತ್ತದೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಶೌಕತ್ ಆಲಿ ಯವರು ವಾದ ನಡೆಸಿರುತ್ತಾರೆ. ಈ ಪ್ರಕರಣದಲ್ಲಿ ಕೊಣಾಜೆ ಪೊಲೀಸ್ ಠಾಣಾ ಎ.ಎಸ್.ಐ ಭಾಸ್ಕರ ಕಾಮತ್ ಮತ್ತು ಪಿ.ಎಸ್.ಐ ಸುಧಾಕರ ರವರು ತನಿಖಾಧಿಕಾರಿಯಾಗಿರುತ್ತಾರೆ.

Leave a Reply

Your email address will not be published. Required fields are marked *