“ಕುಡ್ಲ ಟ್ರಾಫಿಕ್” ವಾಟ್ಸ್ಆಪ್ 9480802303

ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಾರ್ವಜನಿಕರು ಸಂಚಾರ ಸುಧಾರಣೆಯ ಕುರಿತಂತೆ ಮಾಹಿತಿ, ಸಲಹೆ, ಅಹವಾಲು ಮತ್ತು ಸಂಚಾರ ಉಲ್ಲಂಘನೆಗೆ ಸಂಬಂಧಿಸಿದಂತೆ ಮಾಹಿತಿಯನ್ನು ಪೊಲೀಸ್ ಇಲಾಖೆಯೊಂದಿಗೆ ಹಂಚಿಕೊಳ್ಳುವ ದೃಷ್ಟಿಯಿಂದ “ಕುಡ್ಲ ಟ್ರಾಫಿಕ್” ಎಂಬ ವಾಟ್ಸ್ಆಪ್ ನ್ನು ಪ್ರಾರಂಭ ಮಾಡಲಾಗಿರುತ್ತದೆ.

ಈ ಕುಡ್ಲ ಟ್ರಾಫಿಕ್ ವಾಟ್ಸ್ಆಪ್ ನಂಬ್ರವು ಈ ಮೊದಲು 9480802312 ನಂಬ್ರದಲ್ಲಿ ಚಾಲ್ತಿಯಲ್ಲಿದ್ದು, ದಿನಾಂಕ 18-05-2018 ರಿಂದ “ಕುಡ್ಲ ಟ್ರಾಫಿಕ್” ವಾಟ್ಸ್ಆಪ್ ನ್ನು ಪ್ರತ್ಯೇಕ 9480802303 ನಂಬ್ರದಲ್ಲಿ ಚಾಲ್ತಿಯಲ್ಲಿರುತ್ತದೆ. ಇನ್ನೂ ಮುಂದೆ ಮಂಗಳೂರು ನಗರದ ಸಂಚಾರ ಸುವ್ಯವಸ್ಥೆಗೆ ಸಂಬಂಧಿಸಿದ ಮಾಹಿತಿ, ದೂರು, ಸಲಹೆ, ಅಹವಾಲು ಮತ್ತು ಸಂಚಾರ ನಿಯಮ ಉಲ್ಲಂಘನೆ ಮಾಡುವವರ ಮಾಹಿತಿಯನ್ನು ಹೊಸದಾಗಿ ತೆರೆಯಲಾದ ವಾಟ್ಸ್ಆಪ್ ನಂಬ್ರ 9480802303 ಗೆ ಕಳುಹಿಸಿಕೊಡುವಂತೆ ಕೋರಲಾಗಿದೆ.

ಸಾರ್ವಜನಿಕರು ಸಂಚಾರ ನಿಯಮ ಉಲ್ಲಂಘನೆ ಮತ್ತು ಸಂಚಾರ ಸುವ್ಯವಸ್ಥೆಗೆ ಅಡ್ಡಿ ಪಡಿಸುವ ವಾಹನಗಳ ಮಾಹಿತಿಗಳನ್ನು ಸದ್ರಿ ವಾಹನಗಳ ಸಂಖ್ಯೆಯು ಸ್ಪಷ್ಟ ರೀತಿಯಲ್ಲಿ ಕಾಣುವ ಹಾಗೆ ಫೋಟೋವನ್ನು ತೆಗೆದು, ಸಂಚಾರ ಉಲ್ಲಂಘನೆ ಮಾಡಿದ ದಿನಾಂಕ, ಸಮಯ, ಸ್ಥಳದ ಮಾಹಿತಿಯನ್ನು 9480802303 ನಂಬ್ರದ ವಾಟ್ಸ್ಆಪ್ ಸಂಖ್ಯೆಗೆ ಹಾಕಿದ್ದಲ್ಲಿ ಕಾನೂನಿನ ರೀತಿ ಕ್ರಮ ಕೈಗೊಳ್ಳಲಾಗುವುದು ಅಥವಾ ಸೂಕ್ತ ಪರಿಹಾರವನ್ನು ಸಂಬಂಧಿಸಿದ ಪ್ರಾಧಿಕಾರದದಿಂದ ಕಂಡುಕೊಳ್ಳಲಾಗುವುದು.
ಸಾರ್ವಜನಿಕರು ಇದರ ಅನುಕೂಲವನ್ನು ಪಡೆದು ಪೊಲೀಸರ ಜೊತೆಗೆ ಸಹಕಾರ ನೀಡುವುದರರೊಂದಿಗೆ ಮಂಗಳೂರಿನ ಸುಗಮ ಸಂಚಾರಕ್ಕೆ ತಮ್ಮ ಕೊಡುಗೆಯನ್ನು ನೀಡಲು ಕೋರಿದೆ.

Leave a Reply

Your email address will not be published. Required fields are marked *