ಕರ್ನಾಟಕ – ಕೇರಳ ಗಡಿಯಲ್ಲಿ ಬೃಹತ್ ಗಾಂಜಾ ಜಾಲಾ ಪತ್ತೆ ಮಾಡಿರುವ ದಕ್ಷಿಣ ರೌಡಿ ನಿಗ್ರಹ ದಳ

ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಿಗೆ  ದಿನಾಂಕ 17-1-2018 ರಂದು ಕೇರಳ ಗಡಿ ಪ್ರದೆಶವಾದ ನೆತ್ತಲಪದವು ಎಂಬಲ್ಲಿ ಮಹಮ್ಮದ್ ಅಜೀಜ್ @ ಅಬ್ದುಲ್ ಅಜೀಜ್ ಮತ್ತು ಇಮ್ತಿಯಾಜ್ ಎಂಬವರು ಆಕ್ಟೀವಾ ಸ್ಕೂಟರ್ ನಲ್ಲಿ ತಿರುಗಾಡುತ್ತಾ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ರೌಡಿನಿಗ್ರಹದಳದ ಸಿಬ್ಬಂದಿಗಳು ಮತ್ತು ಕೊಣಾಜೆ ಠಾಣೆಯ ಪೊಲೀಸ್ ನಿರೀಕ್ಷಕರೊಂದಿಗೆ ಕಾರ್ಯಾಚರಣೆ ನಡೆಸಿ, ನೆತ್ತಿಲ ಪದವು ಕಲ್ಲರಕೋಡಿ ಎಂಬಲ್ಲಿ ಸುಮಾರು 10.250 ಕೆ.ಜಿ. ಗಾಂಜಾ ಮತ್ತು ಕೆ.ಎ.19-ಕ್ಯೂ -1625 ನಂಬ್ರದ ಸ್ಕೂಟರನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ. ಸ್ಥಳದಲ್ಲಿ ಗ್ರಾಹಕರಿಗೆ ಮಾರಾಟ ಮಾಡಲು ಗಾಂಜಾ ಪೊಟ್ಟಣಗಳೊಂದಿಗೆ ಕಾಯುತ್ತಿದ್ದಾಗ ಧಾಳಿ ಮಾಡಿದ ಪೊಲೀಸರನ್ನು ಕಂಡು ಗುಡ್ಡದ ಇಳಿಜಾರಿನಲ್ಲಿ ಓಡಿ ಪರಾರಿಯಾಗಿರುತ್ತಾರೆ.

ಆರೋಪಿತರ ವಿವರ. :-

1) ಮಹಮ್ಮದ್ ಅಜೀಜ್ @ ಅಬ್ದುಲ್ ಅಜೀಜ್(34), ತಂದೆ ಇಬ್ರಾಹಿಂ, ವಾಸ : 3 ಸೆನ್ಸ್ ಮನೆ, ತೌಡುಗೋಳಿ, ನರಿಂಗಾನ ಗ್ರಾಮ, ಬಂಟ್ವಾಳ ತಾಲೂಕು.

2) ಮಹಮ್ಮದ್ ಇಮ್ತಿಯಾಜ್(26) ತಂದೆ ಕುಂಞಮೋನು, ವಾಸ 3-129/23/2, ಕಂಚಿನಡ್ಕ್, ಮುಳ್ಳುಗುಡ್ಡೆ, ತಲಪಾಡಿ

ಮೇಲ್ಕಂಡ ಪರಾರಿಯಾದ ಆರೋಪಿತರಲ್ಲಿ ಅಜೀಜ್ ಎಂಬಾತನನ್ನು ಕೊಣಾಜೆ ಠಾಣೆಯ ಪೊಲೀಸರು ಪತ್ತೆ ಹಚ್ಚಿ ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.  ಸದ್ರಿ ಅಜೀಜ್ ನನ್ನು ವಿಚಾರಿಸಿದಾಗ ಈತನು ಈ ಮೊದಲು ಉಳ್ಳಾಲ, ಕೊಣಾಜೆ ಮತ್ತು ಕಾವೂರು ಪೊಲೀಸ್ ಠಾಣೆಗಳಲ್ಲಿ ಗಾಂಜಾ ಪ್ರಕರಣದ ಆರೋಪಿತನಾಗಿರುತ್ತಾನೆ. ಎರಡನೇ ಆರೋಪಿ ಇಮ್ತಿಯಾಜನು ಉಳ್ಳಾಲ ಠಾಣೆಯ ಹಳೇ ಅಪರಾಧಿಯಾಗಿದ್ದು, ಈತನ ವಿರುದ್ದ ಕೂಡಾ ಹಲವಾರು ಪ್ರಕರಣ ದಾಖಲಾಗಿರುತ್ತದೆ.

ಸ್ವಾಧೀನಪಡಿಸಿಕೊಂಡಿರುವ ಗಾಂಜಾ ಪೊಟ್ಟಣಗಳನ್ನು ಮತ್ತು ಸ್ಕೂಟರನ್ನು ಕೊಣಾಜೆ ಠಾಣೆಗೆ ಹಸ್ತಾಂತರಿಸಲಾಗಿದ್ದು, ಕಾನೂನು ಕ್ರಮ ಜರುಗಿಸಲಾಗಿರುತ್ತದೆ. ಸ್ವಾಧೀನಪಡಿಕೊಂಡ ಗಾಂಜಾದ ಬೆಲೆ ಸುಮಾರು ರೂ. 1,60,000/- ಎಂದು ಅಂದಾಜಿಸಲಾಗಿದೆ.

ಮಂಗಳೂರು ದಕ್ಷಿಣ ಉಪ ವಿಭಾಗದ ಎ.ಸಿ.ಪಿ. ರವರ ನೇತ್ರತ್ವದಲ್ಲಿ ಪಿ.ಐ. ಕೊಣಾಜೆ ಹಾಗೂ  ರೌಡಿ ನಿಗ್ರಹ ದಳದ ಸಿಬ್ಬಂದಿಯವರು ಪತ್ತೆ ಕಾರ್ಯದಲ್ಲಿ ಬಾಗವಹಿಸಿದ್ದಾರೆ.

 

Leave a Reply

Your email address will not be published. Required fields are marked *