ಎ.ಸಿ.ಪಿ ದಕ್ಷಿಣ ಉಪವಿಭಾಗ ಹಾಗೂ ಅವರ ರೌಡಿ ನಿಗ್ರಹ ತಂಡದಿಂದ ಗಾಂಜಾ ವಶ

ದಿನಾಂಕ 18-10-2017 ರಂದು 12:45 ಗಂಟೆಯ ಸಮಯ ಎ.ಸಿ.ಪಿ. ದಕ್ಷಿಣ ರವರು ರೌಂಡ್ಸ್ ನಲ್ಲಿದ್ದ ಸಮಯ ತಲಪಾಡಿ  ಬಳಿಯಲ್ಲಿ ಕೆ.ಎ.-14-ಇ-3378 ನೇ ನಂಬ್ರ ನೀಲಿ ಬಣ್ಣದ ಬಜಾಜ್ ಡಿಸ್ಕವರಿ ಬೈಕ್ ಇಟ್ಟು ಅದರಲ್ಲಿ ಕುಳಿತು ಗಾಂಜಾ ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿ ತಿಳಿದಂತೆ ಕೂಡಲೇ ರೌಡಿ ನಿಗ್ರಹದಳ ಸಿಬ್ಬಂದಿಗಳೊಂದಿಗೆ ತೆರಳಿ   ಅಲ್ಲಿದ್ದ ರಹಿಮಾನ್ ಅಬ್ದುಲ್ @ ಅದ್ರಾಮ, ಪ್ರಾಯ 40, ತಂದೆ : ಮಹಮ್ಮದ್ ಕಣಚೂರು, ವಾಸ : ಕಣಚೂರು ಕಾಟೇಜ್, ಕೆ.ಜಿ.ಎಂ. ರೋಡ್, ಮಂಜೇಶ್ವರ ರೈಲ್ವೇ ಸ್ಟೇಷನ್ ಎದುರು, ಮಂಜೇಶ್ವರ, ಮತ್ತು ಇನ್ನೊಬ್ಬನು ತನ್ನ ಹೆಸರು ಮಮ್ಮು ಬ್ಯಾರಿ @ ಮಹಮ್ಮದ್ ಬ್ಯಾರಿ (55) ತಂದೆ ಇಸ್ಮಾಯಿಲ್ ಬ್ಯಾರಿ, ಪಲಹಾ ಶಾಲೆ ಹಿಂದುಗಡೆ, ಹೊಸನಗರ, ತಲಪಾಡಿ, ಎಂಬವರನ್ನು ದಸ್ತಗಿರಿ ಮಾಡಿ ,ಅವರಿಂದ ಸುಮಾರು 250 ಗ್ರಾಂ ಗಾಂಜಾ, ನಗದು 3810/- ಮತ್ತು ಅವರಲ್ಲಿದ್ದ ಮೋಟಾರು ಸೈಕಲ್ ವಶಪಡಿಸಿಕೊಂಡಿದ್ದು, ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ.55110/- ಆಗಬಹುದು.ಇವರನ್ನು  ಮುಂದಿನ ಕ್ರಮದ ಬಗ್ಗೆ  ಉಳ್ಳಾಲ ಪೊಲೀಸ್ ಠಾಣೆಗೆ ಹಸ್ತಾಂತರಿಸಿ ಪ್ರಕರಣ ದಾಖಲಾಗಿರುತ್ತದೆ.

ಮಾನ್ಯ ಪೊಲೀಸ್ ಆಯುಕ್ತರ ಮತ್ತು ಮೇಲಾಧಿಕಾರಿಯವರ ಆದೇಶದಂತೆ ಮಂಗಳೂರು ದಕ್ಷಿಣ ಉಪವಿಭಾಗ ಎಸಿಪಿ ರಾಮರಾವ್ ನೇತೃತ್ವದ ರೌಡಿನಿಗ್ರಹ  ದಳದ ಸಿಬ್ಬಂದಿಯವರು ಕಾರ್ಯಾಚರಣೆಯನ್ನು ಮಾಡಿರುತ್ತಾರೆ.

Leave a Reply

Your email address will not be published. Required fields are marked *