ಅಬ್ದುಲ್ ಬಶೀರ್ ಎಂಬವರ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಮಂಗಳೂರು ನಗರ ಸಿಸಿಬಿ ಪೊಲೀಸರು ಯಶಸ್ವಿ.

ಮಂಗಳೂರು ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಾರ ಚೌಕಿ  ಬಳಿಯಲ್ಲಿ ಅಬ್ದುಲ್ ಬಶೀರ್ ಎಂಬವರ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಮಂಗಳೂರು ನಗರ ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಪ್ರಕರಣದ ವಿವರ

ದಿನಾಂಕ: 03-01-2018 ರಂದು ರಾತ್ರಿ 10-00 ಗಂಟೆಗೆ ಮಂಗಳೂರು ನಗರದ ಕೊಟ್ಟಾರ ಚೌಕಿ ಬಳಿ ಫಾಸ್ಟ್ ಪುಡ್  ವ್ಯಾಪಾರವನ್ನು ನಡೆಸುತ್ತಿದ್ದ ಅಬ್ದುಲ್ ಬಶೀರ್ ಎಂಬವರು ತನ್ನ ಫಾಸ್ಟ್ ಪುಡ್ ಹೊಟೇಲ್ ನ್ನು ಬಂದ್ ಮಾಡಿ ಮನೆಗೆ ಹೋಗುವಷ್ಟರಲ್ಲಿ ಬೈಕ್ ನಲ್ಲಿ ಬಂದ ಆರೋಪಿಗಳು ಅಬ್ದುಲ್ ಬಶೀರ್ ನನ್ನು ಮರಣಾಂತಿಕವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದು, ಗಂಭೀರವಾಗಿ ಗಾಯಗೊಂಡ ಅಬ್ದುಲ್ ಬಶೀರ್ ರವರು ಚಿಕಿತ್ಸೆ ಬಗ್ಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಈ ಬಗ್ಗೆ ಅಬ್ದುಲ್ ಬಶೀರ್ ರವರ ಅಣ್ಣ ಅಬ್ದುಲ್ ಲತೀಫ್ ರವರು ನೀಡಿದ ದೂರಿನಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಈ ಕೊಲೆ ಯತ್ನ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಈ ಕೃತ್ಯದಲ್ಲಿ ಭಾಗಿಯಾದ ಕೆಳಕಂಡ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

  1. ಶ್ರೀಜಿತ್ ಪಿ.ಕೆ @ ಶ್ರೀಜು, ಪ್ರಾಯ(25), ತಂದೆ: ಪ್ರಭಾಕರ,ವಾಸ: ಶ್ರೀಜ ನಿಲಯ, ಕೃಷ್ಣ ನಗರ, ಅಂಬಾರ್, ಉಪ್ಪಳ, ಕಾಸರಗೋಡು, ಕೇರಳ ರಾಜ್ಯ-
  2. ಕಿಶನ್ ಪೂಜಾರಿ, ಪ್ರಾಯ(21), ತಂದೆ: ಸುಧೀರ್, ವಾಸ: ಅಳಪೆ ಕಂಡೇವು ಮನೆ, ಪಡೀಲ್ ಅಂಚೆ, ಮಂಗಳೂರು.
  3. ಧನುಷ್ ಪೂಜಾರಿ, ಪ್ರಾಯ(22), ತಂದೆ: ಸುಧೀರ್, ವಾಸ: ಅಳಪೆ ಕಂಡೇವು ಮನೆ, ಪಡೀಲ್ ಅಂಚೆ, ಮಂಗಳೂರು.
  4. ಸಂದೇಶ್ ಕೋಟ್ಯಾನ್, ಪ್ರಾಯ(22), ತಂದೆ: ರಾಘವ, ವಾಸ: ಜೋಗಿಗುಡ್ಡೆ ಮನೆ, ಕುಂಜತ್ತೂರು, ಮಂಜೇಶ್ವರ, ಕಾಸರಗೋಡು, ಕೇರಳ ರಾಜ್ಯ.

ಆರೋಪಿಗಳಲ್ಲಿ

  1. ಆರೋಪಿ ಶ್ರೀಜಿತ್ ಪಿ.ಕೆ @ ಶ್ರೀಜು ಎಂಬಾತನ ವಿರುದ್ಧ ಕಾಸರಗೋಡು ವ್ಯಾಪ್ತಿಯಲ್ಲಿ 6 ಪ್ರಕರಣಗಳು ಮತ್ತು ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ 1 ಪ್ರಕರಣಗಳು ದಾಖಲಾಗಿದ್ದು ತಿಳಿದುಬಂದಿರುತ್ತದೆ.
  2. ಆರೋಪಿ ಕಿಶನ್ ಪೂಜಾರಿ ಎಂಬಾತನ ವಿರುದ್ದ ಒಟ್ಟು 3 ಪ್ರಕರಣ ದಾಖಲಾಗಿರುತ್ತದೆ.
  3. ಆರೋಪಿ ಧನುಷ್ ಪೂಜಾರಿ ಎಂಬಾತನ ವಿರುದ್ಧ ಈ ಹಿಂದೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಮತ್ತು ದೊಂಬಿ ಪ್ರಕರಣವೊಂದು ದಾಖಲಾಗಿರುತ್ತದೆ.
  4. ಆರೋಪಿ ಸಂದೇಶ್ ಎಂಬಾತನ ವಿರುದ್ಧ ಕಾಸರಗೋಡು ಜಿಲ್ಲೆಯ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿರುತ್ತದೆ.

ಸದರಿ ಪ್ರಕರಣದ ಆರೋಪಿಗಳ ಪತ್ತೆ ಕಾರ್ಯಾಚರಣೆ ತಂಡದಲ್ಲಿ ಮಂಗಳೂರು ಸಿಸಿಬಿ ಪೊಲೀಸ್ ಇನ್ಸ್‌ಪೆಕ್ಟರ್‌ ಶಾಂತರಾಮ್, ಪಿಎಸ್ಐ ಶ್ಯಾಮ್ ಸುಂದರ್, ಎಎಸ್ಐ ಹರೀಶ್ ಹಾಗೂ ಸಿಬ್ಬಂದಿಯರವರಾದ ರಾಮ ಪೂಜಾರಿ, ಗಣೇಶ್, ಚಂದ್ರಶೇಖರ, ಶೀನಪ್ಪ, ಚಂದ್ರ, ಸುಬ್ರಹ್ಮಣ್ಯ, ಚಂದ್ರಹಾಸ, ಯೋಗೀಶ್, ರಾಜೇಂದ್ರ ಪ್ರಸಾದ್, ಅಬ್ದುಲ್ ಜಬ್ಬಾರ್, ಮಣಿ, ಪ್ರಶಾಂತ್ ಶೆಟ್ಟಿ, ಅಶಿತ್ ಡಿ ಸೋಜಾ, ತೇಜಕುಮಾರ್ ಹಾಗೂ ರಿತೇಶ್ ರವರುಗಳು ಇದ್ದು,  ಈ ಕೊಲೆ ಯತ್ನ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

ಪ್ರಕರಣದ ತನಿಖೆಯನ್ನು ಎಸಿಪಿ ಸಿಸಿಆರ್‌ಬಿ ಶ್ರೀ. ವೆಲೈಂಟಿನ್‌ ಡಿ’ಸೋಜಾ ರವರು ಕೈಗೊಂಡಿದ್ದು ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *