ಅಕ್ರಮ ಮರಳು ಸಾಗಿಸುತ್ತಿದ್ದ ಆರು ಲಾರಿಗಳ ವಶ.

ದಿನಾಂಕ 10-8-2017 ರಂದು ಬೆಳಗ್ಗಿನ ಜಾವ ಮಂಗಳೂರು ದಕ್ಷಿಣ ಉಪ ವಿಭಾಗದ ಎ.ಸಿ.ಪಿ. ರವರು ಉಳ್ಳಾಲ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳೊಂದಿಗೆ ತಲಪಾಡಿಯಿಂದ ದೇವಿಪುರ ಕಡೆಗೆ ಹೋಗುವ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಸಮಯ ಮಂಗಳೂರು ತೊಕ್ಕೊಟ್ಟು ಕಡೆಯಿಂದ ಕೇರಳಕ್ಕೆ ಮರಳು ತುಂಬಿಸಿ ಸಾಗಿಸುತ್ತಿದ್ದ ಮೂರು ಟಿಪ್ಪರ್ ಲಾರಿಗಳಾದ 1) KA-37 6637, (2) KA-19 D-2051 (3) KA-19 B-9010 ಹಾಗೂ ಮೂರು ಘನ ಲಾರಿಗಳ ನಂಬ್ರ ನೋಡಲಾಗಿ (1) KL-14 M-7036, (2) KA-44 1899 (3) KA-19 AB-0962 ಲಾರಿಗಳನ್ನು ಪತ್ತೆ ಹಚ್ಚಿರುತ್ತಾರೆ.
ಈ ಕುರಿತಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಕರಣದಲ್ಲಿ 8 ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ.

ದಸ್ತಗಿರಿ ಮಾಡಿದ ಆರೋಪಿಗಳ ವಿವರ :-
1) ಅಬ್ದುಲ್ ಗಫೂರ್ ಪ್ರಾಯ 21 ವರ್ಷ ತಂದೆ ಅಬ್ಬಾಸ್, ವಾಸ ರಯ್ಯಾನಾ ಮಂಜೀಲ್, ರೆಹಮಾನಿಯ ಜುಮ್ಮಾ ಮಸೀದಿಯ ಹತ್ತಿರ, ಪಾವೂರು, ಮಂಜೇಶ್ವರ ತಾಲೂಕು, ಕಾಸರಗೋಡು ಜಿಲ್ಲೆ.
2) ನಿಝಾಮುದ್ದೀನ್ @ ನಿಝಾಂ ಪ್ರಾಯ 22 ವರ್ಷ ತಂದೆ ಹಸನ್ ಕುಟ್ಟಿ, ವಾಸ ಕಟ್ಟತಡ್ಕ ಮನೆ, ಪುತ್ತಿಗೆ ಗ್ರಾಮ ಮತ್ತು ಅಂಚೆ, ಕುಂಬಳೆ, ಕಾಸರಗೋಡು
3) ಹಸೈನಾರ್ @ ಹಸನ್, ಪ್ರಾಯ 20 ವರ್ಷ ತಂದೆ ಮಹಮ್ಮದ್, ವಾಸ ಗೇರುಕಟ್ಟೆ ಮನೆ, ವಕರ್ಾಡಿ, ಪಾವೂರು, ಮಂಜೇಶ್ವರ ತಾಲೂಕು, ಕಾಸರಗೋಡು ಜಿಲ
4) ಇಮ್ರಾನ್ ಪ್ರಾಯ 27 ವರ್ಷ ತಂದೆ ಹಂಸ, ವಾಸ ಕೆದಂಬಾಡಿ ಹೌಸ್, ಪಾವೂರು ಗ್ರಾಮ ಮತ್ತು ಅಂಚೆ, ಮಂಜೇಶ್ವರ, ಕಾಸರಗೋಡು.
5) ಅಬುಬಕ್ಕರ್ ಪ್ರಾಯ 45 ವರ್ಷ ತಂದೆ ಮೊಯಿದ್ದೀನ್ ಕುಂಞಿ, ವಾಸ ಯುಜಿ ಗೆಟ್, ಕೆಸಿ ನಗರ, ತಲಪಾಡಿ ಗ್ರಾಮ, ಮಂಗಳೂರು
6) ಆರೀಫ್ ಪ್ರಾಯ 26 ವರ್ಷ ತಂದೆ ಇಸ್ಮಾಯಿಲ್, ವಾಸ ಆಲಡ್ಕ ಮನೆ, ಅರೆಕಳ ಅಂಚೆ ಮತ್ತು ಗ್ರಾಮ, ಮಂಗಳೂರು ತಾಲೂಕು
7) ಅನ್ಸಾರ್ ಪ್ರಾಯ 20 ವರ್ಷ ತಂದೆ ಮಹಮ್ಮದ್, ವಾಸ ಪೂಜಾರಿ ಕಂಪೌಂಡು, ಕೆ.ಸಿ. ನಗರ, ತಲಪಾಡಿ ಗ್ರಾಮ, ಮಂಗಳೂರು ತಾಲೂಕು
8) ನೌಶಾದ್ ಪ್ರಾಯ 21 ವರ್ಷ ತಂದೆ ಇಸ್ಮಾಯಿಲ್, ವಾಸ ಕಾಟುಂಗರಗುಡ್ಡೆ ಮನೆ, ಕೆ.ಸಿ. ರೋಡ್, ತಲಪಾಡಿ ಗ್ರಾಮ, ಮಂಗಳೂರು ತಾಲೂಕು

ವಶಪಡಿಸಲಾದ ಮೂರು ಟಪ್ಪರ್ ಲಾರಿ ಮತ್ತು ಮೂರು ಘನ ಲಾರಿಗಳ ಒಟ್ಟು ಮೌಲ್ಯ ರೂ, 40,00,000/- ಹಾಗೂ ಸ್ವಾಧೀನಪಡಿಸಿದ ಮರಳಿನ ಮೌಲ್ಯ ರೂ. 45,000/- ವಾಗಿರುತ್ತದೆ.
ಮೇಲ್ಕಂಡ ಮರಳುಗಳನ್ನು ಮಂಗಳೂರು ತಾಲೂಕಿನ ಕಣ್ಣೂರು, ಅಡ್ಯಾರ್ ಸಹ್ಯಾದ್ರಿ ಕಾಲೇಜ್ ಬಳಿ ಮತ್ತು ಕಲ್ಲಾಪುವಿನ ಧಕ್ಕೆಯಿಂದ ಲೋಡ್ ಮಾಡಿಕೊಂಡು ಕೇರಳ ಕಡೆಗೆ ಸಾಗಿಸುತ್ತಿದ್ದ ಖಚಿತ ಮಾಹಿತಿ ದೊರಕಿಂದಂತೆ ಪೊಲೀಸ್ ಆಯುಕ್ತರ ಮಾರ್ಗದರ್ಶನದಂತೆ ಪತ್ತೆಹಚ್ಚಲಾಗಿರುತ್ತದೆ.

 

 

Leave a Reply

Your email address will not be published. Required fields are marked *