Mangalore City Police

ಒಂಟಿ ಮಹಿಳೆಯರನ್ನು ಗುರಿಯಾಗಿಸಿ ಸರ ಕಳ್ಳತನ ಮಾಡುತಿದ್ದ ಯುವಕರ ಬಂಧನ

ಮಂಗಳೂರು ನಗರದಲ್ಲಿ ಒಂದೆರಡು ವರ್ಷಗಳಿಂದ ಜನರಹಿತ ಪ್ರದೇಶಗಳಲ್ಲಿ ನಡೆದುಕೊಂಡು ಹೋಗುವ ಒಂಟಿ ಮಹಿಳೆಯರನ್ನು ಗುರಿಯಾಗಿಸಿ ಸರಗಳ್ಳತನ ಮಾಡುತ್ತಿದ್ದ ಮೂರು ...
Read more

Daily Crime Reports : November 18, 2017

Daily Crime Reports : 18-11-2017

ದಿನಾಂಕ 18-11-2017 ರ 17:00  ಗಂಟೆ  ವರೆಗಿನ ಮಂಗಳೂರು ನಗರ  ಪೊಲೀಸ್‌ ಕಮೀಷನರೇಟ್‌  ವ್ಯಾಪ್ತಿಯಲ್ಲಿ  ವರದಿಯಾದ ಪ್ರಕರಣಗಳು  ಈ  ಕೆಳಗಿನಂತಿದೆ.

ಕೊಲೆ  ಪ್ರಕರಣ : 0
ಕೊಲೆ  ಯತ್ನ : 0
ದರೋಡೆ ಪ್ರಕರಣ : 0
ಸುಲಿಗೆ ಪ್ರಕರಣ : 0
ಹಲ್ಲೆ ಪ್ರಕರಣ : 0
ಮನೆ ಕಳವು ಪ್ರಕರಣ : 0
ಸಾಮಾನ್ಯ ಕಳವು : 0
ವಾಹನ ಕಳವು : 0
ಮಹಿಳೆಯ ಮೇಲಿನ ಪ್ರಕರಣ : 0
ರಸ್ತೆ ಅಪಘಾತ  ಪ್ರಕರಣ : 2
ವಂಚನೆ ಪ್ರಕರಣ : 0
ಮನುಷ್ಯ ಕಾಣೆ ಪ್ರಕರಣ : 0
ಇತರ ಪ್ರಕರಣ : 1

 

Crime Reported in Mangalore Traffic East Police Station

ದಿನಾಂಕ: 16/11/2017 ರಂದು ಮಂಗಳೂರು ನಗರದ ಬೆಂದೂರ್‌‌ವೆಲ್‌ ಬಸ್‌ ಸ್ಟಾಪ್‌ ಬಳಿ ಪಿರ್ಯಾದಿದಾರರ  ತಂದೆ ರಾಮ ಕೆ. ಎಂಬವರು ರಸ್ತೆ ದಾಟುತ್ತಿದ್ದ ವೇಳೆ KL-14-U-3074 ನಂಬ್ರದ ಮೋಟಾರು ಸೈಕಲನ್ನು ಅದರ ಸವಾರ ಶಿವಕಿರಣ್ ಎಂಬಾತನು ವಿಷ್ಣು ಮೂರ್ತಿ ಎಂಬಾತನನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ಕಂಕನಾಡಿ ಕಡೆಯಿಂದ ಬಲ್ಮಠ ಕಡೆಗೆ ಸಾರ್ವಜನಿಕ ಕಾಂಕ್ರಿಟ್ ರಸ್ತೆಯಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ರಾಮ ಕೆ. (50) ರವರಿಗೆ ಡಿಕ್ಕಿ ಪಡಿಸಿದ ಪರಿಣಾಮ ರಾಮ ಕೆ. ರವರು ಕಾಂಕ್ರಿಟ್ ರಸ್ತೆಗೆ ಬಿದ್ದು, ತಲೆಗೆ ಗಂಭೀರ ಸ್ವರೂಪದ ಒಳ ಗಾಯವಾಗಿ ಪ್ರಜ್ಞಾ ಹೀನ ಸ್ಥಿತಿಯಲ್ಲಿ, ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಅತ್ತಾವರದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾರೆ, ಮೋಟಾರು ಸೈಕಲ್ ಸವಾರ ಶಿವಕಿರಣನಿಗೆ ಸಣ್ಣ ಪ್ರಮಾಣದ ಗಾಯವಾಗಿರುತ್ತದೆ ಸದ್ರಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Crime Reported in Barke Police Station

ಪಿರ್ಯಾದಿದಾರರಾದ ಧೀರಜ್ ಹಾಗೂ ಅವರ ಸ್ನೇಹಿತ ರಕ್ಷಣ್ ದಿನಾಂಕ 17-11-2017 ರಂದು ರಾತ್ರಿ 8:30 ಗಂಟೆಗೆ ಕೆಲಸ ಮುಗಿಸಿ ಮನೆಗೆ ಹೋಗುವರೇ ಬೈಕಿನಲ್ಲಿ ಬಳ್ಳಾಲ್ ಭಾಗಿನಲ್ಲಿರುವ ದೀಪೋತ್ಸವ ಸಮಿತಿ ಬಳಿ ಬರುತ್ತಿರುವಾಗ ರೋಹಿತ್ ಶೆಟ್ಟಿ, ಮೋಹಿತ್ ಶೆಟ್ಟಿ, ಸುವೀತ್, ಪ್ರಶಾಂತ್ ಶೆಟ್ಟಿ (ಪಚ್ಚು), ರಾಕೇಶ್ ಶೆಟ್ಟಿ, ವಿವೇಕ್ ಶೆಟ್ಟಿಗಾರ್ ರವರು ಪಿರ್ಯಾದಿದಾರರನ್ನು ಹಾಗೂ ರಕ್ಷಣ್ ರವರನ್ನು  ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು ಜೀವ ಬೆದರಿಕೆ ಒಡ್ಡಿರುತ್ತಾರೆ. ಈ ಕೃತ್ಯಗಳನ್ನು ಆರೋಪಿಗಳು ರಕ್ಷಿತ್ ಕೊಟ್ಟಾರಿಯವರ ಪ್ರೇರಣೆಯಿಂದ ನಡೆಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Crime Reported in Mangalore Traffic South Police Station

ದಿನಾಂಕ 18.11.2017 ರಂದು ಮಂಗಳೂರು ತಾಲೂಕು ಸೋಮೇಶ್ವರ ಗ್ರಾಮದ ಕುಂಪಲ ಬೈಪಾಸ್ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತೊಕ್ಕೊಟ್ಟುವಿನಿಂದ ತಲಪಾಡಿ ಕಡೆಗೆ ಮಾರುತಿ ಓಮ್ನಿ ಕಾರು ನಂಬ್ರ KL 14 F 5840 ನೇದರ ಚಾಲಕನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸುತ್ತಾ ಬಂದು ರಸ್ತೆ ದಾಟುತ್ತಿದ್ದ  ಶ್ರೀಮತಿ ನಿಶಾ ಎಂಬವರಿಗೆ ಢಿಕ್ಕಿ ಹೊಡೆಸಿದ್ದು, ಪರಿಣಾಮ ಶ್ರೀಮತಿ ನಿಶಾ ಎಂಬವರು ಡಾಮಾರು ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯ ಉಂಟಾಗಿ ಚಿಕಿತ್ಸೆ ಬಗ್ಗೆ ತೊಕ್ಕೊಟ್ಟು ನೇತಾಜಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮೃತ ಪಟ್ಟಿರುತ್ತಾರೆ ಸದ್ರಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.